ಮಕಾವುದಲ್ಲಿ ಮುಂದಿನ ತಿಂಗಳು ಇಂಟರ್ನ್ಯಾಶನಲ್ ಇಂಡಿಯನ್ ಫಿಲಂ ಅಕಾಡೆಮಿಯ (ಐಐಎಫ್ಎ) 14ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ. ಈ ವರ್ಷದ ಕಾರ್ಯಕ್ರಮ ಭಾರತೀಯ ಸಿನಿಪ್ರೇಮಿಗಳ ನೆನಪಿನಲ್ಲಿ ಉಳಿಯಲಿದೆ. ತಮ್ಮ ಅಭಿನಯದ ಜತೆಗೆ ನೃತ್ಯದಿಂದಲೂ ಹೆಸರು ಮಾಡಿದ್ದ ತಾರೆಯರಾದ ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ಇಲ್ಲಿ ಡಾನ್ಸ್ ಮಾಡಲಿದ್ದಾರೆ. ಇಬ್ಬರಿಗೂ ಪ್ರಭುದೇವ್ ಕೊರಿಯೊಗ್ರಫಿ ಮಾಡಲಿದ್ದಾರೆ. ಬಹಳ ವರ್ಷಗಳ ನಂತರ ವೇದಿಕೆಯಲ್ಲಿ ಡಾನ್ಸ್ ಮಾಡಲಿರುವ ಶ್ರೀದೇವಿ, ತಮ್ಮ ಹಿಟ್ ಹಾಡು 'ಹವಾ ಹವಾಯಿ' ಸೇರಿದಂತೆ ಕೆಲವು ಗೀತೆಗಳಿಗೆ ಹೆಜ್ಜೆ ಹಾಕಲಿದ್ದಾರೆ. ಇನ್ನು ಮಾಧುರಿಗೆ ಇದು ಮೊದಲ ಐಐಎಫ್ಎ ಕಾರ್ಯಕ್ರಮ. ಹೀಗಾಗಿ ಆಕೆಯೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.