ಪಾಕಿಸ್ತಾನದಿಂದ ಮುಂಬೈ, ಅಲ್ಲಿಂದ ಸೀದಾ ಸಿಲಿಕಾನ್ ಸಿಟಿಗೆ ಬಂದಳು. 'ಚಳಿ ಚಳಿ ತಾಳೆನು ಈ ಚಳಿಯಾ' ಎಂದು ರಾಗ ಎಳೆದ ಪಡ್ಡೆಗಳ ಎದೆಗೆ ಬಿಸಿ ಬಾಣ ಬೀಸಿ, ಕ್ಯಾಮೆರಾಕ್ಕೂ ಚಳಿ ಬಿಡಿಸಿದಳು ಈ ಬಿಚ್ಚಮ್ಮ. ಈಕೆಯ ಹಾಟ್ ಫೋಟೋಗಳು ಕಡ್ಲೆ ಪುರಿಯಂತೆ ಮಾಧ್ಯಮಗಳಲ್ಲಿ ಮಾರಾಟವಾಗುತ್ತಿದ್ದರೆ ಲೋಕಲ್ ನಾಯಕಿಯರ ಹೊಟ್ಟೆ ಕೊತ ಕೊತ ಅಂತ ಕುದಿಯುತ್ತಿತ್ತು. ಆರಂಭದಲ್ಲೇ ಆ ಆಮದು ತಾರೆ ಸ್ಥಳೀಯ ನಾರಿಯರ ಕೆಂಗಣ್ಣಿಗೆ ಗುರಿಯಾಗಿದ್ದು ಹೀಗೆ. ಆಕೆ ಬೇರ್ಯಾರೂ ಅಲ್ಲ, ಪಾಕಿಸ್ತಾನ ಮೂಲದ ಬಾಂಬೆ ಬೆಡಗಿ ವೀಣಾ ಮಲ್ಲಿಕ್.
ನಟ ಅಕ್ಷಯ್ ಕುಮಾರ್ ಅಭಿನಯದ ಕನ್ನಡದ 'ಸಿಲ್ಕ್' ಚಿತ್ರಕ್ಕೆ ಬಂದ ಈ ಮಲ್ಲಿಕಾ ಮಣಿ ಮತ್ತೊಮ್ಮೆ ಕನ್ನಡದ ನಾಯಕಿಯರ ಹೊಟ್ಟೆ ಉರಿಸಿದ್ದಾಳೆ. ಅದು ಸಂಭಾವನೆ ವಿಚಾರದಲ್ಲಿ. 'ಸಖತ್ ಹಾಟ್ ಮಗಾ' ಎನ್ನುತ್ತಲೇ ಬೇಕೆಂದಾಗಲೆಲ್ಲ ಬಿಕಿನಿ ತೊಟ್ಟು ನೀರಿನಲ್ಲಿ ಮುಳುಗಿದವಳ ನಿಜವಾದ ರೇಟು ಒಂದು ಕೋಟಿ! ಅಯ್ಯೋ ಅಪಾರ್ಥ ಮಾಡಿಕೊಳ್ಳಬೇಡಿ. ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಬಂದ ಈಕೆ ಗಾಂಧಿನಗರದಲ್ಲಿ 'ಡರ್ಟಿಯಾಗಲು', ಕೇಳಿದಾಗಲೆಲ್ಲ ಬಟ್ಟೆ ಕಳಚಿ ಎಕ್ಸ್ಪೋಸ್ ನೀಡಲು ತೆಗೆದುಕೊಂಡ ಒಟ್ಟು ಸಂಭಾವನೆ ರು. 1 ಕೋಟಿ. ಹೌದು, ಇದುವರೆಗೂ ಕನ್ನಡದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ. ಅಗ್ರ ನಾಯಕಿ ಎನ್ನಿಸಿಕೊಂಡ ರಮ್ಯಾನೇ ಇಲ್ಲಿವರೆಗೂ 40 ಲಕ್ಷ ರು. ದಾಟಿಲ್ಲ ಎನ್ನುತ್ತದೆ ಗಾಂಧಿನಗರ. ಹೆಚ್ಚೆಂದರೆ ರಮ್ಯಾ 30 ಲಕ್ಷ ರು. ಪಡೆದಿರಬಹುದು. ತೆಲುಗು, ತಮಿಳು, ಹಿಂದಿಯಲ್ಲಿ ಕೋಟಿಗೆ ಬೆಲೆಯೇ ಇಲ್ಲ.ಆದರೆ ಕನ್ನಡದಲ್ಲಿ ಕೋಟಿಯನ್ನು ಕೇಳರಿಯದ ನಟಿಯರಿಗೆ ವೀಣಾಳ ಈ ಸಂಭಾವನೆ ನೋಡಿ 'ಅಯ್ಯಾ ನಮ್ತಾವ ಇಲ್ದಿರೋದೇನು, ಆಯಮ್ಮನ್ತಾವ ಇದೆ?' ಅಂತ ಒಂದೇಸಮನೆ ಪ್ರಶ್ನಿಸಿಕೊಳ್ಳುತ್ತಿದ್ದಾರಂತೆ.
- ಕೇಶು