ಬಾಲಿವುಡ್ನ ಬಳಕುವ ಲೇಡಿ ಕರೀನಾ ಬಿದ್ದು ಬಿಟ್ಳಂತೆ! ಜೀರೊ ಸೈಜ್ ಜಪ ಮಾಡುತ್ತ ಸರಿಯಾಗಿ ತಿನ್ನದೇ ಇದ್ದರೆ ಇನ್ನೇನಾದೀತು ಅಂತೀರಾ? ನಿಶ್ಯಕ್ತಿಯಿಂದ ಆದದ್ದಲ್ಲ ಇದು. ಹಗ್ಗದ ಮೇಲಿನ ನಡಿಗೆ ಕಸರತ್ತು ಮಾಡಲು ಹೋಗಿ ಎಡವಿ ಬಿದ್ದಿದ್ದಾಳೆ. 'ಗೋರಿ ತೇರೆ ಪ್ಯಾರ್ ಮೈನ್' ಚಿತ್ರದ ಚಿತ್ರೀಕರಣದಲ್ಲಿ ಆಧಾರವಿಲ್ಲದೆ ಹಗ್ಗದ ಮೇಲೆ ನಡೆಯುವ ದೃಶ್ಯದ ಚಿತ್ರೀಕರಣ ವೇಳೆ ಬಿದ್ದುಬಿಟ್ಟಿದ್ದಾಳೆ.
ಸ್ಟಂಟ್ ಮ್ಯಾನ್ ನೆರವು ಬೇಡ ಎನ್ನುತ್ತ ಸ್ಟಂಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ ಕರೀನಾ ಕಪೂರ್ ಪಠಾಣ್. ಪುನೀತ್ ಮಲ್ಹೋತ್ರ ನಿರ್ದೇಶನದ ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಕರೀನಾಳೇ ಕಾಮಿಡಿಗೆ ಒಳಗಾಗಬಾರದಿತ್ತು ಎಂದು ಅವಳ ವಿರೋಧಿಗಳು ತೆರೆಮರೆಯಲ್ಲಿ ನಗುತ್ತಿದ್ದಾರಂತೆ.