ರಾಮ್ಗೋಪಾಲ್ ವರ್ಮಾ, ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ. ಪ್ರೇಕ್ಷಕರು ನಿರೀಕ್ಷಿಸುವ ಚಿತ್ರಗಳಿಗಿಂತ ತಾವೇ ಮೆಚ್ಚಿಕೊಂಡ ಚಿತ್ರಗಳನ್ನು ಕೊಟ್ಟವರು ವರ್ಮಾ. 'ಚಿತ್ರ ಮೊದಲು ನನಗೆ ಇಷ್ಟವಾಗಬೇಕು. ಆ ಮೇಲೆ ಪ್ರೇಕ್ಷಕರ ಮಾತು' ಎನ್ನುವ ವರ್ಮಾ, ಪ್ರತಿ ಚಿತ್ರಕ್ಕೂ ಕುತೂಹಲದ ಮೊಟ್ಟೆ ಇಟ್ಟವರು. ಇವರ ನೆರಳಲ್ಲಿ ಯಾವುದೇ ಚಿತ್ರ ಬರಲಿ, ಅದು ಹೇಗೆ ಇರಲಿ ಅಲ್ಲಿ ನಾಯಕಿಯರು ಮಾತ್ರ ಕೊಂಚ ಹಾಟ್ ಆಗಿಯೇ ಇರುತ್ತಾರೆ. ಅಂಡರ್ವರ್ಲ್ಡ್, ಪ್ರೀತಿ, ಪ್ರೇಮ, ಭೂತ, ಪ್ರೇತ, ಮಾಟ, ಮಂತ್ರ... ಹೀಗೆ ಏನೇ ವಿಷಯಗಳಿದ್ದರೂ ನಾಯಕಿ ಮಾತ್ರ ನೋಡುಗನ ಕಣ್ಣು ಕುಕ್ಕಬೇಕು ಎಂಬುವಷ್ಟರ ಮಟ್ಟಿಗೆ ವರ್ಮಾ ಕಂಪನಿಯ ಹುಡುಗಿಯರು ಮಾಡ್.
ಸದ್ಯ ಈಗ 'ಸತ್ಯ- 2' ಚಿತ್ರ ಸೆಟ್ಟೇರಿ ಚಿತ್ರೀಕರಣ ಮುಗಿಸಿದೆ. ಈ ಚಿತ್ರದ ಟ್ರೈಲರ್ಗಳು ಬಿಡುಗಡೆಯಾಗಿದ್ದು, ಇಲ್ಲಿ ವರ್ಮಾರ ಚಿತ್ರ ಎಂಬುದಕ್ಕಿಂತ ಆ ಚಿತ್ರದಲ್ಲಿ ನಾಯಕಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಬಿಳಿ ಜಿರಳೆಯಂತೆ, ಬಳ್ಳಿಯಂತೆ ಬಳಕುವ ಈಕೆಯ ಹೆಸರು ಅನೈಕಾ. ವರ್ಮಾ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಬೆಡಗಿ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ತಮ್ಮ 'ಕಾಲ್'ಗುಣ, 'ಎದೆ'ಭಾರ ಕಾಣುವಂತೆ ಬ್ಲ್ಯಾಕ್ಡ್ರೆಸ್ನಲ್ಲಿ ಕಾಣಿಸಿಕೊಂಡ ಅನೈಕಾಳತ್ತ ಎಲ್ಲರ ನೋಟಗಳು ನೆಟ್ಟಿತ್ತು. ನಟನೆಯಲ್ಲಿ ಆಕೆಯೂ ತುಂಬಾ ಆ್ಯಕ್ಟಿವ್. ಅಲ್ಲಿದ್ದವರೆಲ್ಲ 'ವರ್ಮಾ ಹುಡುಗಿ ಸಖತ್ ಹಾಟ್ ಗುರು' ಅಂತಲೇ ಲೊಚಗುಟ್ಟಿದ್ದಾರೆ.
- ಕೇಶು