ಬಾಲಿವುಡ್ನ ಬಹುಮುಖ ಪ್ರತಿಭೆ ಕುನಾಲ್ ರಾಯ್ ಕಪೂರ್ಗೊಬ್ಬ ಹೀರೋ ಬೇಕಂತೆ! ಎಷ್ಟು ಹುಡುಕಿದರೂ ಅವರಿಗೆ ಒಪ್ಪುವ ನಾಯಕ ಸಿಗುತ್ತಿಲ್ಲವಂತೆ.
'ಡೆಲ್ಲಿ ಬೆಲ್ಲಿ' ಖ್ಯಾತಿಯ ನಟನ 'ಗೋಲು ಅಂಡ್ ಪಪ್ಪು' ಬಿಡುಗಡೆಗೆ ಸಿದ್ಧವಾಗಿದೆ. 2009ರಲ್ಲಿ ತೆರೆ ಕಂಡ 'ದಿ ಪ್ರೆಸಿಡೆಂಟ್ ಈಸ್ ಕಮಿಂಗ್'ನಲ್ಲಿ ಕ್ಯಾಮೆರಾ ಹಿಂದೆಯೂ ಕೆಲಸ ಮಾಡಿದ್ದ. ಈಗ ನಿರ್ದೇಶನಕ್ಕೆ ಇಳಿಯುವ ಹಂಬಲ. 'ಕಥೆ ಸಿದ್ಧವಿದೆ, ನಿರ್ಮಾಪಕರೂ ಸಿಕ್ಕಿದ್ದಾರೆ. ಆದರೆ ಹೀರೊ ಸಿಗುತ್ತಿಲ್ಲ. ಕಥೆಗೆ ತಕ್ಕ ನಾಯಕ ಸಿಕ್ಕರೆ ನಾಯಕಿ ಸೇರಿದಂತೆಇತರ ಪಾತ್ರಧಾರಿಗಳ ಆಯ್ಕೆ ಸುಲಭ' ಎನ್ನುತ್ತಿರುವ ಕುನಾಲ್ಗೆ, ಈ ವರ್ಷಾಂತ್ಯದೊಳಗೆ ಚಿತ್ರೀಕರಣ ಆರಂಭಿಸುವ ಆಸೆ ಇದೆ.