ರಾಖಿ ಸಾವಂತ್ ನಡೆಸಿದ 'ಸ್ವಯಂವರ' ಬೇಜಾನ್ ಸುದ್ದಿಮಾಡಿದ್ದು ಗೊತ್ತೇ ಇದೆ. ಈಗ ಮಲ್ಲಿಕಾ ಶೆರಾವತ್ ಅದೇ ರೀತಿಯ ಶೋ ಮಾಡಲು ಹೊರಟಿದ್ದಾಳೆ. ಅದರ ಹೆಸರು 'ಬ್ಯಾಚುಲೊರೆಟ್ ಇಂಡಿಯಾ'. ತುಂಬಾ ಎಚ್ಚರಿಕೆಯಿಂದಲೇ ಈ ಶೋ ನಡೆಸಿಕೊಡುತ್ತೇನೆ ಎನ್ನುವ ಮಲ್ಲಿಕಾ, ಪುರುಷರಲ್ಲಿನ ಪರಿಶುದ್ಧ ಪ್ರೀತಿಯನ್ನು ಹುಡುಕಲು ಯತ್ನಿಸುತ್ತಾಳಂತೆ. ಆದರೆ, ಇಲ್ಲಿ ತಾನು ಯಾರಿಗೂ ಮದುವೆ ಆಗುತ್ತೀನೆಂದು ಪ್ರಾಮಿಸ್ ಮಾಡುವುದಿಲ್ಲವಂತೆ. 30 ಸುರಸುಂದರಾಂಗರು ಈ ಶೋನಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಅಂದಹಾಗೆ, ಇಲ್ಲಿ ಯಾವುದೇ ಮದುವೆ ನಡೆಯುವುದಿಲ್ಲ. ಐಟಂ ಸಾಂಗಿನಲ್ಲೂ ರಾಖಿಯನ್ನು ಮೀರಿಸಿರುವ ಮಲ್ಲಿಕಾ, ಇಲ್ಲೂ ಅಂಥದ್ದೇ ಮಿಂಚು ಹರಿಸಬಹುದೇನೋ?