ಮಲ್ಲಿಕಾ ಶೆರಾವತ್ ಎಂದಾಕ್ಷಣ ಪಡ್ಡೆಗಳ ಮನದಲ್ಲಿ 'ಏನೋ ಒಂಥರಾ...' ಅಂತ ಹಾಡು ಶುರುವಾಗುತ್ತೆ. ಹಾಟ್ಹಾಟ್ ದೃಶ್ಯದಲ್ಲಿ ಹಸಿಹಸಿಯಾಗಿ ಕಾಣಿಸಿಕೊಂಡಿರುವ ಮಲ್ಲಿಕಾಗೆ ಈಗ ಸ್ವಲ್ಪ ವೈರಾಗ್ಯ ಬಂದಿರುವಂತೆ ಕಾಣ್ತಿದೆ. ಎಲ್ಲಾ ಚಿತ್ರಗಳಲ್ಲೂ ತನ್ನನ್ನು ತೆರೆದುಕೊಳ್ಳುತ್ತಿದ್ದ ಈ ವೈಯ್ಯಾರಿಗೆ ಈಗ ಉತ್ತಮ ಪಾತ್ರಗಳಲ್ಲಿ ನಟಿಸುವ ಆಸೆಯಂತೆ! ಸಣ್ಣ ಪಾತ್ರವಾದರೂ ಸರಿ 'ನಟಿ'ಸುತ್ತೇನೆ. ಆದರೆ ಅದರಲ್ಲಿ ನಟನೆಗೆ ಉತ್ತಮ ಅವಕಾಶವಿರಬೇಕು ಎಂದು ಹಲುಬುತ್ತಿದ್ದಾಳೆ. ಕ್ಲಾಸಿಕ್ ನಿರ್ದೇಶಕರು ಈಕೆಯನ್ನು 'ಕೆಟ್ಟ ಮೇಲೆ ಬುದ್ಧಿ ಬಂತಲ್ಲ' ಎಂದೆಲ್ಲ ಟೀಕಿಸದೆ
ಅವಕಾಶ ಕೊಡ್ತಾರಾ?