ಬಾಲಿವುಡ್ನ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಕಂ ನಿರ್ಮಾಪಕಿ ಪೂಜಾ ಭಟ್, ಸೈನೊಜುರ್ ಎಂಟರ್ಟೈನ್ಮೆಂಟ್ ಮತ್ತು ವೇವ್ಸ್ ಜತೆ ಸಹನಿರ್ಮಾಪಕಿಯಾಗಿದ್ದ ಆಕೆ 'ಬ್ಯಾಡ್' ಚಿತ್ರದ ಪ್ರಾಜೆಕ್ಟ್ನಿಂದ ಆಚೆ ಬಂದಿದ್ದಾಳೆ. ಇದಕ್ಕೆ ಕಾರಣ ಮಿತಿ ಮೀರಿದ ಬಡ್ಜೆಟ್. ಆಕೆಯೇ ಹೇಳುವಂತೆ, 'ಚಿತ್ರಕ್ಕೆ ನಿಗದಿಯಾಗಿದ್ದ ಬಡ್ಜೆಟ್ಟೇ ಒಂದು. ಈಗ ಆಗುತ್ತಿರುವುದೇ ಇನ್ನೊಂದು. ನನ್ನ ಕೈ ಮೀರಿ ಖರ್ಚಾಗುತ್ತಿದೆ. ಈ ಚಿತ್ರಕ್ಕೆ ಇಷ್ಟೊಂದು ಹಣ ಹೂಡುವುದು ಅನವಶ್ಯಕ. ಮೇಲಾಗಿ ನನಗೆ ಹಣ ಕೊಡುವವರಿಗೂ ಲಾಸ್ ಆಗಬಾರದು. ಹಾಗಾಗಿ ಚಿತ್ರ ನಿರ್ಮಾಣದಿಂದ ಹೊರಬಂದಿದ್ದೇನೆ'. ಪೂಜಾ ನಿರ್ಧಾರಕ್ಕೆ ತಲೆ ಕೆಡಿಸಿಕೊಳ್ಳದ ಸೈನೊಜುರ್ ಎಂಟರ್ಟೈನ್ಮೆಂಟ್ನ ಅಮಿತ್ ಕಪೂರ್, ವೇವ್ಸ್ ಸಂಸ್ಥೆ ಜೊತೆಗೂಡಿ ಈ ಚಿತ್ರ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.