'ಬಡಿ ಬದ್ಮಾಷ್' ಹಾಗೂ 'ಪಿಂಕಿ' ಚಿತ್ರಗಳಲ್ಲಿ ಐಟಂ ಸಾಂಗ್ಗೆ ಡ್ಯಾನ್ಸ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡೆಸಿದ್ದ ಮಾದಕ ಚೆಲುವೆ ಪ್ರಿಯಾಂಕ ಚೋಪ್ರಾ, ಈಗ ಮುಜ್ರಾ ನೃತ್ಯದ ಮೂಲಕ ಮತ್ತಷ್ಟು ಕಿಚ್ಚು ಹಚ್ಚಲು ಬರುತ್ತಿದ್ದಾಳೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ರಾಮ್ ಲೀಲಾ' ಚಿತ್ರದಲ್ಲಿ ಆಧುನಿಕ ಮುಜ್ರಾ ನೃತ್ಯ ಮಾಡಿರುವುದಾಗಿ ಚೋಪ್ರಾ ಹೇಳಿಕೊಂಡಿದ್ದಾಳೆ. ಈ ಡ್ಯಾನ್ಸ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವ ಪ್ರಿಯಾಂಕ, 'ಇದು ಬೇರೆ ನೃತ್ಯಗಳಂತಿಲ್ಲ. ವಿಶೇಷವಾಗಿದ್ದು, ಭಾರತೀಯ ಸಂಗೀತ ಮತ್ತು ಪಾಶ್ಚಾತ್ಯ ಸ್ಪರ್ಶ ಇರುವುದರಿಂದ ಬೇರೆ ರೀತಿಯೇ ಕಾಣಿಸಲಿದೆ. ಕೆಲಸದ ಒತ್ತಡದಿಂದಾಗಿ ಬೆಳಗ್ಗೆ ಸಮಯದಲ್ಲಿ ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡಲಾಗುತ್ತಿರಲಿಲ್ಲ, ರಾತ್ರಿ ಸಮಯದಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಬೇಕಾಯಿತು' ಎಂದಿದ್ದಾಳೆ. ಈ ನೃತ್ಯ ಮಾಡಲು ಮೊದಲು ಐಶ್ವರ್ಯ ರೈ ಅವರನ್ನು ಕೇಳಲಾಗಿತ್ತಂತೆ.