ಖ್ಯಾತ ನಟ ಅಮಿರ್ಖಾನ್ ಹುಡುಗಿ ವೇಷದಲ್ಲಿ ದೆಹಲಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರಂತೆ. ಹುಡುಗಿಯರ ಲಿಪ್ಸ್ಟಿಕ್ ಹಚ್ಚಿಕೊಂಡು, ಗಾಗ್ರ ತೊಟ್ಟು ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡುತ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಅಯ್ಯೋ ಅಮಿರ್ಗೇನಾಯ್ತು? ಯಾಕ್ ಈ ಚಟ ಅಂಟಿಸಿಕೊಂಡರು? ಅಂತೆಲ್ಲ ಅಲ್ಲಿನ ಜನ ಮಾತಾಡ್ಕೊಳ್ತಿದ್ದಾರೆ. ಆದರೆ, ವಿಷಯ ಏನೆಂದರೆ, ರಾಜ್ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ಸಿನಿಮಾ ಶೂಟಿಂಗ್ನಲ್ಲಿ ಅಮಿರ್ ಬ್ಯುಸಿಯಾಗಿದ್ದಾರೆ. ಆ ಚಿತ್ರದಲ್ಲಿ ನಾಯಕ ನಟಿ ತನ್ನ ಲಿಪ್ಸ್ಟಿಕ್, ಗಾಗ್ರವನ್ನು ಯಾವುದೋ ಸನ್ನಿವೇಶದಲ್ಲಿ ಬಿಟ್ಟು ಹೋಗಿರುತ್ತಾರೆ. ಅದನ್ನು ಅಮಿರ್ಖಾನ್ ತೆಗೆದುಕೊಂಡು ಆಕೆಯನ್ನು ಹುಡುಕುವಾಗ ನಾಯಕಿಯ ಲಿಪ್ಸ್ಟಿಕ್ ಹಚ್ಚಿಕೊಂಡು, ಆಕೆಯ ಗಾಗ್ರ ಹಾಕಿಕೊಂಡು ದೆಹಲಿಯ ರಸ್ತೆಗಳಲ್ಲಿ ಹುಡುಕುತ್ತಿರುತ್ತಾನೆ. ಇದನ್ನೇ ಜನ ತಪ್ಪಾಗಿ ತಿಳ್ಕೊಂಡರೆ ಅದಕ್ಯಾರು ಹೊಣೆ? ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ತೆಲುಗಿನ ಖ್ಯಾತ ನಟಿ ಕನ್ನಡದ ಅನುಷ್ಕಾ ಶರ್ಮಾ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.