ಬಾಲಿವುಡ್

ಅಚ್ಚರಿಯೆನಿಸಿದರೂ ಇದು 'ಸತ್ಯ'!

ಹೌದು! ಇದು ಸತ್ಯ. ರಾಮ್ ಗೋಪಾಲ್ ವರ್ಮಾ ಇನ್ಮುಂದೆ ಅಂಡರ್ ವರ್ಲ್ಡ್ ಸಿನಿಮಾ ಮಾಡೋದಿಲ್ವಂತೆ! ಹಾಗಂತ ಅವರೇ ಘೋಷಿಸಿದ್ದಾರೆ. ಸದ್ಯದಲ್ಲೇ ತೆರೆ ಕಾಣಲಿರುವ ...

ಹೌದು! ಇದು ಸತ್ಯ. ರಾಮ್ ಗೋಪಾಲ್ ವರ್ಮಾ ಇನ್ಮುಂದೆ ಅಂಡರ್ ವರ್ಲ್ಡ್ ಸಿನಿಮಾ ಮಾಡೋದಿಲ್ವಂತೆ! ಹಾಗಂತ ಅವರೇ ಘೋಷಿಸಿದ್ದಾರೆ. ಸದ್ಯದಲ್ಲೇ ತೆರೆ ಕಾಣಲಿರುವ ಸತ್ಯ-ಭಾಗ 2 ಚಿತ್ರವೇ ಅವರ ಕೊನೆಯ ಅಂಡರ್‌ವರ್ಲ್ಡ್ ಚಿತ್ರವಂತೆ. ಖುದ್ದು ಆರ್‌ಜಿವಿಯೇ ಇದಕ್ಕೆ ಸಮಜಾಯಿಷಿಯನ್ನೂ ನೀಡಿದ್ದಾರೆ. ಇನ್ಮುಂದೆ ಅವರು ರೊಮ್ಯಾಂಟಿಕ್ ಮೂವೀಸ್ ಮಾತ್ರ ಮಾಡ್ತಾರಂತೆ. ಹಾಗಾಗಿ, ಇದೇ (ಸತ್ಯ-2) ನನ್ನ ಕೊನೆಯ ಭೂಗತ ಜಗತ್ತಿನ ಸಬ್ಜೆಕ್ಟ್ ಇರೋ ಚಿತ್ರ ಅಂದಿದ್ದಾರೆ ಅವರು. ಆದರೆ, ಒಂದಂತೂ ಸತ್ಯ. ಅಂಡರ್‌ವರ್ಲ್ಡ್ ಕಥಾವಸ್ತುವುಳ್ಳ ಚಿತ್ರಗಳಿಗೆ ಹೊಸ ಸ್ಪರ್ಶ, ಹೊಸ ನಿರೂಪಣಾ ಶೈಲಿ ಕೊಟ್ಟಿದ್ದು ಇದೇ ಆರ್‌ಜಿವಿ. ಭಾರತದಲ್ಲಿ ಅಂಥಾ ಚಿತ್ರಗಳ ಹೊಸ ಟ್ರೆಂಡ್ ಹುಟ್ಟುಹಾಕಿದವರು ಅವರು. ಈಗ, ಅವರೇ ತಮ್ಮ ಜಾಡನ್ನು ಬಿಡುವ ಮಾತಾಡಿರೋದು ಅವರ ಶೈಲಿಯ ಚಿತ್ರಗಳನ್ನು ಮೆಚ್ಚುವ ಅನೇಕರಿಗೆ ನಿರಾಸೆ ತಂದಿರಬಹುದು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!