ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾಳ ಪ್ರತಿಯೊಂದು ನಡೆ, ನುಡಿಗೂ ಭಾರಿ ಪಬ್ಲಿಸಿಟಿ ದೊರಕುತ್ತಿದೆ. ತಾಜಾ ಸುದ್ದಿ ಏನು ಗೊತ್ತಾ? ಬಾಲಿವುಡ್ ನಟಿಯರ ಪೈಕಿ ಅತ್ಯಂತ ಮಾದಕ ನಿತಂಬಗಳನ್ನು ಹೊಂದಿರುವಾಕೆ ಎಂಬ ಹೆಗ್ಗಳಿಕೆ ಅವಳಿಗೆ ಸಿಕ್ಕಿದೆ.
ಸಂಸ್ಥೆಯೊಂದು ಇತ್ತೀಚೆಗೆ ನಡೆಸಿದ ವೋಟಿಂಗ್‌ನಲ್ಲಿ ಈ ವಿಚಾರವಾಗಿ ಪ್ರಿಯಾಂಕಾ ಚೋಪ್ರಾಗೆ ಅತ್ಯಧಿಕ ಮತ ಬಂದಿದೆ. ಕರೀನಾ ಕಪೂರ್, ದೀಪಿಕಾ ಪಡುಕೋಣೆ ಅವರನ್ನು ಬದಿಗೊತ್ತಿ ಪ್ರಿಯಾಂಕಳನ್ನು ಜನ ಮೆಚ್ಚಿಕೊಂಡಿದ್ದಾರೆ. ಕರೀನಾ ಮತ್ತು ದೀಪಿಕಾ ಇಬ್ಬರನ್ನೂ ಹಿಂದಿಕ್ಕಿ ಪ್ರಿಯಾಂಕಾ ಈ 'ಗೌರವ'ಕ್ಕೆ ಪಾತ್ರಳಾಗಿದ್ದಾಳೆ. ಐಶ್ವರ್ಯ ರೈ ಬಚ್ಚನ್ ಹಾಗೂ ಸೆಕ್ಸಿ ಕ್ವೀನ್ ಮಲ್ಲಿಕಾ ಶೆರಾವತ್ ಅವರು ಈ ಮೂವರ ಸನಿಹದಲ್ಲಿಯೂ ಇಲ್ಲ ಎನ್ನುವುದು ವಿಶೇಷ.
ಅದು ಬಿಡಿ. ಇತ್ತೀಚೆಗೆ ಪ್ರಿಯಾಂಕಾ 'ಫಿಲಂಫೇರ್' ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಮನಸ್ಸಿನ ವಿಚಿತ್ರ ಬಯಕೆಯನ್ನು ಹೇಳಿಕೊಂಡಿದ್ದಳು. ಅದೆಂದರೆ ಆರು ಸಲ ಮದುವೆಯಾಗುವ ಆಸೆ! ಸಂದರ್ಶನ ನಡೆಸುತ್ತಿದ್ದವರು ದಂಗು! ತಕ್ಷಣ ಸಾವರಿಸಿಕೊಂಡು ಪಿಸಿ, 'ಅಯ್ಯೋ ಆರು ಸಲ ಅಂದ್ರೆ ಆರು ಮಂದಿಯನ್ನಲ್ಲ. ಒಬ್ಬನನ್ನೇ ಆರು ಸಲ ಮದುವೆಯಾಗೋದು' ಅಂತ ಸ್ಪಷ್ಟನೆ ನೀಡಿದಳು. ಮೊದಲ ಬಾರಿ ಸ್ವಂತ ಊರು ಅಂಬಾಲಾದಲ್ಲಿ, ಎರಡನೇ ಬಾರಿ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರ್ರೀಪ್‌ನ ಅಂಡರ್ ವಾಟರ್‌ನಲ್ಲಿ, ಮೂರನೇ ಬಾರಿ ಲಾಸ್‌ವೇಗಾಸ್‌ನಲ್ಲಿ, ನಾಲ್ಕನೇ ಬಾರಿ ಸ್ವಿಟ್ಜರ್‌ಲೆಂಡ್‌ನಲ್ಲಿ ಮದುವೆಯಾಗುವ ಬಯಕೆ ಅವಳದ್ದಂತೆ. ಐದು ಮತ್ತು ಆರನೇ ಬಾರಿ ಎಲ್ಲಿ ಮದುವೆಯಾಗಬೇಕು ಎನ್ನುವ ಆಯ್ಕೆಯನ್ನು ಪತಿಗೆ ಬಿಟ್ಟು ಕೊಡುತ್ತಾಳಂತೆ! ಆದರೆ ಆ ಭಾಗ್ಯ ಯಾರಿಗೆ ಸಿಗಲಿದೆ ಎನ್ನುವುದನ್ನು ಮಾತ್ರ ಬಾಯಿಬಿಟ್ಟಿಲ್ಲ.
-ಆರ್. ಶಿವಕುಮಾರ್