ಕರೀನಾ ಕಪೂರ್ ಎಂಬ ಬಡನಡುವಿನ ನಟಿ ಸೈಫ್ ಅಲಿ ಖಾನ್ ಪಟೌಡಿ ಕೈ ಹಿಡಿದು ಕರೀನಾ ಕಪೂರ್ ಖಾನ್ ಪಟೌಡಿ ಆಗಿ ವರ್ಷ ಸಮೀಪಿಸುತ್ತ ಬಂತು. ಮದುವೆ ಈಕೆ ಬದುಕಿನಲ್ಲಿ ಏನೇನೂ ವ್ಯತ್ಯಾಸ ತಂದಿಲ್ಲವಂತೆ. 'ನಮ್ಮಿಬ್ಬರ ವಿವಾಹ ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಗಿತ್ತು. ಆದರೆ ನಮಗೆ ಹಾಗೆ ಅನ್ನಿಸಲೇ ಇಲ್ಲ. ನಾನು ಮತ್ತು ಸೈಫ್ ಮುಂಚೆ ಹೇಗಿದ್ದೆವೋ ಮದುವೆ ಬಳಿಕವೂ ಹಾಗೆಯೇ ಇದ್ದೇವೆ. ಸೈಫ್ ಸ್ವಲ್ಪವೂ ಬದಲಾಗಿಲ್ಲ. ಆತ ಮುಂದೆಯೂ ಹೀಗೆಯೇ ಇರಲಿ ಎನ್ನುವುದೇ ನನ್ನಾಸೆ' ಎಂದು ಹೇಳಿಕೊಂಡಿದ್ದಾಳೆ ಕರೀನಾ. ಹಾಗಿದ್ದರೆ ಮದುವೆ ಏಕೆ ಬೇಕಿತ್ತು? ಐದು ವರ್ಷ ನಡೆಸಿದ ಸಾಂಗತ್ಯ ಜೀವನವನ್ನೇ ಮುಂದುವರಿಸಬಹುದಿತ್ತಲ್ಲ ಎನ್ನುವ ತನ್ನ ವಿರೋಧಿಗಳ ಕುಹಕ ಅವಳ ಕಿವಿಗೆ ಬಿದ್ದಿಲ್ಲವಂತೆ.