ಹೊಸ ಪೀಳಿಗೆಯ ನಟಿಯರು ಎಷ್ಟು ಪ್ರಾಕ್ಟಿಕಲ್ ನೋಡಿ. ಬಾಲಿವುಡ್‌ನ ಲೆಕ್ಕಾಚಾರಗಳು ಅವರಿಗೆ ಚೆನ್ನಾಗಿ ಗೊತ್ತು. ನೀಳಕಾಲುಗಳ ನೇಹಾ ಹಿಂಗೆ ಕೂಡ ಇದೇ ವಾಸ್ತವದ ಕುರಿತು ಆಲೋಚಿಸುವವಳು. ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಕೈತುಂಬಾ ಸಂಬಳ ತರುವ ಉದ್ಯೋಗ. ಮಾಡೆಲಿಂಗ್ ಆಕೆಯ ಹವ್ಯಾಸ. 2010ರಲ್ಲಿ 'ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್' ಕಿರೀಟವನ್ನೂ ಮುಡಿಗೇರಿಸಿಕೊಂಡಳು. ರ್ಯಾಂಪ್‌ನಲ್ಲಿ 'ಮಾರ್ಜಾಲ ನಡಿಗೆ' ಮಾಡುತ್ತಿದ್ದಾಗಲೇ ನಿರ್ದೇಶಕ ಮಧುರ್ ಭಂಡಾರ್ಕರ್ ಕಣ್ಣಿಗೆ ಬಿದ್ದಳು. 'ಲವ್ ಯು ಸೋನಿಯೋ' ಚಿತ್ರದ ನಾಯಕಿಯಾಗಿ ಆಯ್ಕೆಯೂ ಆದಳು. ಬಣ್ಣದ ಜಗತ್ತಿನಲ್ಲಿ ನಾಯಕಿಯರು ಬಹುಬೇಗ ಬೇಡಿಕೆ ಕಳೆದುಕೊಳ್ಳುತ್ತಾರೆ ಎನ್ನುವ ವಾಸ್ತವ ನೇಹಾಗೆ ಚೆನ್ನಾಗಿ ಗೊತ್ತು. ಹೀಗಾಗಿ, 'ಇಲ್ಲಿ ಏರಿಳಿತಗಳು ಸಾಮಾನ್ಯ. ಸಿಕ್ಕ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ. ಪ್ರತಿ ಚಿತ್ರವೂ ಬಿಟೌನ್‌ನಲ್ಲಿ ನನ್ನ ಸ್ಥಾನ ಭದ್ರಪಡಿಸುವಂತಿರಬೇಕು. ಅಂತಹ ಅವಕಾಶಗಳು ಸಿಗದಿದ್ದರೆ ಬೇಸರವೇನೂ ಇಲ್ಲ' ಎಂದು ನುಡಿದು ನಿರ್ಲಿಪ್ತಳಾಗುತ್ತಾಳೀಕೆ.