ಇರ್ಫಾನ್ ಖಾನ್ ಎಂಬ ಪ್ರತಿಭಾವಂತ ಕಲಾವಿದ ಈಗ ನಿರುದ್ಯೋಗಿ. ಕಲಾತ್ಮಕ, ಕಮರ್ಷಿಯಲ್... ಎಲ್ಲಾ ಬಗೆಯ ಸಿನಿಮಾಗಳಲ್ಲಿ, ಬಹುತೇಕವಾಗಿ ಸಮಕಾಲೀನ ಎಲ್ಲ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದ; ಕಿರುತೆರೆ ನಿರೂಪಕನಾಗಿಯೂ ಹೆಸರು ಗಳಿಸಿದ್ದ; ಜಾಹೀರಾತುಗಳಲ್ಲಿಯೂ ಮಿಂಚಿದ್ದ ಇರ್ಫಾನ್ ಈಗ ಅವಕಾಶಗಳೇ ಇಲ್ಲದೆ ಮನೆಯಲ್ಲಿ ಕುಳಿತಿದ್ದಾನೆ. 'ನಾನೀಗ ನಿರುದ್ಯೋಗಿ. ನನ್ನ ಬಳಿ ಈಗ ಯಾವುದೇ ಸಿನಿಮಾ ಇಲ್ಲ. ಒಂದಷ್ಟು ಸ್ಕ್ರಿಪ್ಟ್ಗಳಿವೆ. ಆರಾಮವಾಗಿ ಕುಳಿತು ಅವುಗಳನ್ನು ಓದುತ್ತಿದ್ದೇನೆ' ಎಂದಿದ್ದಾನೆ ಇರ್ಫಾನ್. ರಿತೇಶ್ ಬಾತ್ರಾ ಚೊಚ್ಚಲ ನಿರ್ದೇಶನದ 'ದಿ ಲಂಚ್ಬಾಕ್ಸ್'ನಲ್ಲಿ ನಟಿಸಿದ ಬಗ್ಗೆ ಇರ್ಫಾನ್ಗೆ ಭಾರೀ ಖುಷಿ ಇದೆ. 'ತೆರೆ ಕಾಣಬೇಕಿರುವ ಈ ಸಿನಿಮಾದಲ್ಲಿ ರೋಮ್ಯಾನ್ಸ್ನ ಛಾಯೆ ಇದೆ. ರೋಮ್ಯಾನ್ಸ್ ಚಿತ್ರಗಳಲ್ಲಿ ನಟಿಸುವುದು ನನ್ನ ಆಸೆಯೂ ಆಗಿತ್ತು' ಎಂದಿದ್ದಾನೆ.