'ಪ್ರಿನ್ಸ್' ಚೆಲುವೆ, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನ ಸುಂದರಿ, 'ಬಿಗ್ ಬಾಸ್' ಹುಡುಗಿ ನಿಖಿತಾ ತುಕ್ರಾಲ್ ಇನ್ನು ಬಾಲಿವುಡ್ ಬಾಲೆ. ಆಕೆ ಬಿಟೌನ್ ಪ್ರವೇಶಿಸುವುದು ಬಹುತೇಕ ನಿಶ್ಚಯವಾಗಿದೆ. ಮಲೆಯಾಳಂನ ಸೂಪರ್ ಹಿಟ್ ಸಿನಿಮಾ 'ಟ್ರಾಫಿಕ್' ಹಿಂದಿಯಲ್ಲಿ ರೀ ಮೇಕ್ ಆಗಲಿದೆ. ಅದರಲ್ಲಿ ನಿಖಿತಾಗೆ ಮುಖ್ಯಪಾತ್ರ ಸಿಕ್ಕಿದೆ. 'ನಿಖಿತಾ ನಟಿಸುವುದು ಹೌದು. ಆದರೆ ಆಕೆಯ ಪಾತ್ರದ ಕುರಿತು, ತಾರಾಗಣದ ಕುರಿತು, ಸಿನಿಮಾ ಕುರಿತು ಸದ್ಯಕ್ಕೆ ಏನನ್ನೂ ಹೇಳಲಾರೆ' ಎಂದಿರುವುದು ನಿರ್ದೇಶಕ ರಾಜೇಶ್ ಪಿಳ್ಳೈ. ಸಿನಿಮಾದ ಶೀರ್ಷಿಕೆ ಇನ್ನೂ ನಿರ್ಧಾರವಾಗಿಲ್ಲ ಎಂದಿದ್ದಾರೆ ಡೈರೆಕ್ಟರ್ ಸಾಹೇಬರು.