ಗಾಸಿಪ್ಗಳಲ್ಲಿ ಬಾಲಿವುಡ್ಗಿಂತ ತಾನೇನೂ ಕಮ್ಮಿ ಇಲ್ಲಾ ಎಂದು ದಕ್ಷಿಣ ಭಾರತದ ಕಾಲಿವುಡ್ ಇತ್ತೀಚಿನ ದಿನಗಳಲ್ಲಿ ನಿರೂಪಿಸಲು ಹೊರಟಿದೆ. ಇಲ್ಲೂ ದಿನಕ್ಕೊಂದು ಪ್ರೇಮ ಕಹಾನಿ ಬೆಳಕಿಗೆ ಬರುತ್ತಿದೆ. ಯಾರು ಯಾರನ್ನ, ಯಾವಾಗ ಎಷ್ಟು ಸಮಯ ಪ್ರೀತಿಸುತ್ತಾರೆ ಎಂಬುದನ್ನು ತಿಳಿಯುವುದು ಬಲು ಕಷ್ಟದ ಕೆಲಸ ಎನ್ನುತ್ತಿದ್ದಾರೆ ಕಾಲಿವುಡ್ ಮಂದಿ. ಕೆಲವು ದಿನಗಳ ಹಿಂದೆ ಸಿಂಬು, ಹನ್ಸಿಕಾ, ನಯನತಾರ ಹಾಗೂ ಆರ್ಯ ಅವರ ಪ್ರೇಮ ಪ್ರಕರಣವನ್ನು ಮಾಧ್ಯಮಗಳು ಸುದ್ದಿಮಾಡಿದ್ದವು. ಈಗ ಹನ್ಸಿಕಾ ಮತ್ತು ತಮಿಳಿನ ಖ್ಯಾತ ಹಾಸ್ಯ ಕಲಾವಿದ ಸಂತಾನಂ ಮೇಲೆ ಬಿದ್ದಿದೆ. ಅವುಗಳ ಸುದ್ದಿ ಪ್ರಕಾರ ಇವರಿಬ್ಬರ ನಡುವೆ ಲವ್ವಿ ಡವ್ವಿ ನಡೀತಾ ಇದೆಯಂತೆ. ಹನ್ಸಿಕಾಳ ಈ ರೀತಿಯ ವರ್ತನೆಗೆ ಸಿಂಬು ಮೇಲೆ ಆಕೆಗಿರುವ ಕೋಪವೇ? ಅಥವಾ ನಿಜಕ್ಕೂ ಸಂತಾನಂ ಬಗ್ಗೆ ಇರುವ ಪ್ರೀತಿಯಾ? ಎಂಬುದು ತಿಳಿಯುತ್ತಿಲ್ಲ. ಇಬ್ಬರಲ್ಲಿ ಯಾರು ಹರಕೆಯ ಕುರಿ?