ಅದ್ಯಾಕೋ ಸಲ್ಲು ಬರ್ತಾ ಬರ್ತಾ ವಾಚಾಳಿಯಾಗ್ತಿದ್ದಾರೆ ಅನ್ಸತ್ತೆ. ಮೊನ್ನೆ ಮೊನ್ನೆ ಅದ್ದೂರಿಯಾಗಿ ನಡೆದ ಸಲ್ಲು ಬೆಹನ್ ಶಾದಿಯಲ್ಲಿ, ಸ್ಟೇಜ್ ಮೇಲೆ ಕತ್ರಿನಾ ಕೈಫ್ ಅನ್ನೋ ಬದಲು ಕತ್ರಿನಾ ಕಪೂರ್ ಅಂತ ಹೇಳಿ, ಕತ್ರಿನಾಳ ಸಿಟ್ಟಿಗೆ ಕಾರಣವಾಗಿದ್ದು ಹಳೇ ಸಮಾಚಾರ.
ಅಂದು ತುಂಬಿ ತುಳುಕುತ್ತಿದ್ದ ಮದುವೆ ಆರತಕ್ಷತೆಯಲ್ಲಿ ಅಷ್ಟಕ್ಕೇ ಸುಮ್ಮನಿರದ ಸಲ್ಲು, ನಾನು ಅವಳಿಗೆ ಖಾನ್ ಆಗಲು ಚಾನ್ಸ್ ಕೊಟ್ಟೆ ಆದರೆ ಅವಳು ಕಪೂರ್ ಆಗಲು ಬಯಸಿದಳು ಎಂದು ಕತ್ರಿನಾ ಕಾಲು ಎಳೆದಿದ್ದರು. ಸಲ್ಲು ಮಿಯಾನ ಈ ಮಾತಿನಿಂದ ಕತ್ರಿನಾ ಶಾನೆ ಬೇಜಾರು ಮಾಡಿಕೊಂಡಿದ್ರಂತೆ.
ಅಷ್ಟೇ ಅಲ್ಲ ಐದಾರು ದಿನ ಸಲ್ಲು ಮತ್ತು ಸಲ್ಲು ಕುಟುಂಬದ ಯಾವುದೇ ಫೋನ್ ಕರೆಗಳನ್ನು ಕತ್ರಿನಾ ಸ್ವೀಕರಿಸಲೇ ಇಲ್ಲವಂತೆ.
ನಮ್ಮ ಗಾಂಧಿನಗರವನ್ನೂ ಮೀರಿಸುವ ಬಾಲಿವುಡ್ ಜಗುಲಿಯಲ್ಲಿ ಇದು ಸುದ್ದಿಯೋ ಸುದ್ದಿ. ಸಲ್ಲುಗೆ ಅದೇನನ್ಸಿಸಿತೋ ಏನೋ ಸೀದಾ ಕತ್ರಿನಾ ಅಪಾರ್ಟ್‌ಮೆಂಟಿಗೆ ಹೋಗಿ ಕತ್ರಿನಾಳ ಕ್ಷಮೆಯಾಚಿಸಿದ್ದಾರೆ ಎಂಬುದೂ ಬಾಲಿವುಡ್ ಅಂಗಳದಲ್ಲಿ ಗುಸುಗುಡುತ್ತಿದೆ.