ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ) 
ಬಾಲಿವುಡ್

'ಪಿಕೆ' ಬಗ್ಗೆ ಸಲ್ಮಾನ್ ಅಸಮಾಧಾನಗೊಂಡಿದ್ದು ಏಕೆ?

ನಟ ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಿಕೆ ಚಿತ್ರದ ಬಗ್ಗೆ ನಟ ಸಲ್ಮಾನ್ ಖಾನ್ ಅಸಮಾಧಾನಗೊಂಡಿದ್ದಾರಂತೆ..

ಮುಂಬೈ: ನಟ ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಿಕೆ ಚಿತ್ರದ ಬಗ್ಗೆ ನಟ ಸಲ್ಮಾನ್ ಖಾನ್ ಅಸಮಾಧಾನಗೊಂಡಿದ್ದಾರಂತೆ..

ಕಳೆದ ವಾರ ತೆರೆಕಂಡು ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಮೀರ್ಖಾನ್ ಅವರ ಪಿಕೆ ಚಿತ್ರದ ಟಿಕೆಟ್ ದರದ ಬಗ್ಗೆ ನಟ ಸಲ್ಮಾನ್ ಖಾನ್ ಅಸಮಾಧಾನಗೊಂಡಿದ್ದು, ಸಾಮಾನ್ಯ ಜನರಿಗೆ ಟಿಕೆಟ್ ದರ ಕೊಂಚ ದುಬಾರಿಯಾಯಿತು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸಲ್ಮಾನ್ ಕೇವಲ ಲಾಭದ ಉದ್ದೇಶದಿಂದಲೇ ಚಿತ್ರವನ್ನು ನೋಡುವುದು ಸರಿಯಲ್ಲ. ಪ್ರೇಕ್ಷಕರ ಕುರಿತಾಗಿಯೂ ನಾವು ಯೋಚಿಸ ಬೇಕಾಗುತ್ತದೆ. ಚಿತ್ರ ಪ್ರೇಕ್ಷಕರಿಗೆ ಹೇಗೆ ತಲುಪಿಸುತ್ತೇವೆ ಎನ್ನುವುದರ ಮೇಲೆ ಚಿತ್ರದ ಯಶಸ್ಸು ನಿರ್ಧಾರವಾಗುತ್ತದೆ. ಹೀಗಾಗಿ ಸಾಮಾನ್ಯ ಜನರ ಕೈಗೆಟುಕದ ರೀತಿಯಲ್ಲಿ ಟಿಕೆಟ್ದರವನ್ನು ನಿಗದಿ ಮಾಡಬಾರದು ಎಂದು ಅವರು ಹೇಳಿದ್ದಾರೆ. ಅಂತೆಯೇ ಟಿಕೆಟ್ ದರವನ್ನು ಖಡಿತಗೊಳಿಸುವಂತೆ ನಟ ಸಲ್ಮಾನ್ ನಿರ್ಮಾಪಕರಿಗೆ ಸಲಹೆ ನೀಡಿದ್ದಾರೆ.

ನಟ ಅಮೀರ್ಖಾನ್ ಅವರ ಉತ್ತಮ ಸ್ನೇಹಿತನಾಗಿರುವ ಸಲ್ಮಾನ್ ಖಾನ್, ತಮಗೆ ತಪ್ಪು ಎನಿಸಿದ ವಿಚಾರದ ಕುರಿತು ಯಾವುದೇ ಮುಜುಗರವಿಲ್ಲದೇ ಧ್ವನಿ ಎತ್ತುತ್ತಾರೆ. ಅಂತೆಯೇ ಪಿಕೆ ಚಿತ್ರದ ಟಿಕೆಟ್ ದರವನ್ನು ಕಡಿತಗೊಳಿಸದಿದ್ದರೆ, ಚಿತ್ರವು ನಿರೀಕ್ಷಿತ ಯಶಸ್ಸುಗಳಿಸುವುದು ಕಷ್ಟ ಎಂದು ನಿರ್ಮಾಪಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಿಕೆ ಆರಂಭದಿಂದಲೂ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಈ ಹಿಂದೆ ಚಿತ್ರದ ಪೋಸ್ಟರ್ಗಳು ತೀವ್ರ ವಿವಾದ ಹುಟ್ಟುಹಾಕಿದ್ದವು. ಆದರೆ ಚಿತ್ರ ತೆರೆಕಂಡ ಬಳಿಕ ಉತ್ತಮ ಆರಂಭ ಪಡೆದಿದ್ದು, ಟಿಕೆಟ್ ದರ ದುಬಾರಿಯಾಯಿತು ಎನ್ನುವ ಅಭಿಪ್ರಾಯ ಪ್ರೇಕ್ಷಕರ ವಲಯದಿಂದಲೂ ಕೇಳಿಬಂದಿತ್ತು. ಮುಂಬೈನ ಖ್ಯಾತ ಚಿತ್ರಮಂದಿರಗಳಾದ ಮರಾಠ ಮಂದಿರ್ ಮತ್ತು ಮಿನಿ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳು ಟಿಕೆಟ್ ದರ ದುಬಾರಿಯಾಯಿತು ಎಂದೇ ಪಿಕೆ ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದವು.

ಚಿತ್ರವನ್ನು ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ನಿರ್ದೇಶಿಸಿದ್ದು, ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರೊಂದಿಗೆ ವಿದು ವಿನೋದ್ ಚೋಪ್ರಾ, ಸಿದ್ಧಾರ್ಥ್ ರಾಯ್ ಕಪೂರ್  ಅವರು ಕೈ ಜೋಡಿಸಿದ್ದಾರೆ. ಇನ್ನು ಚಿತ್ರದಲ್ಲಿ ಅಮೀರ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್, ಬೊಮ್ಮನ್ ಹಿರಾನಿ ಮತ್ತು ಸಂಜಯ್ ದತ್ ಅವರು ಸಹಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT