ಇತ್ತೀಚೆಗಷ್ಟೇ ಬಾಲಿವುಡ್ಗೆ ಎಂಟ್ರಿ ಕೊಟ್ಟು, ತಾನು ಅಭಿನಯಿಸಿದ ಎರಡು ಚಿತ್ರಗಳು ವಾರಕ್ಕೊಂದರಂತೆ ಬಿಡುಗಡೆ ಆಗುತ್ತಿರುವುದಕ್ಕೆ ಇಲಿಯಾನ ಫುಲ್ ಥ್ರಿಲ್ ಆಗಿದ್ದಾಳೆ. ಆಕೆ ನಟಿಸಿರುವ ಎರಡು ಹಿಂದಿ ಚಿತ್ರಗಳು ಮಾರ್ಚ್ 28 ರಂದು ಹ್ಯಾಪಿ ಎಂಡಿಂಗ್ ಮತ್ತು ಎಪ್ರಿಲ್ 4 ರಂದು ಮೈ ತೇರಾ ಹೀರೊ ಬಿಡುಗಡೆಯಾಗುತ್ತಿದೆ. ಈ ಎರಡೂ ಚಿತ್ರಗಳೂ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾಳೆ ಇಲಿಯಾನಾ. ಒಂದರಲ್ಲಿ ಸೈಫ್ ಅಲಿ ಖಾನ್ ಮತ್ತೊಂದರಲ್ಲಿ ವರುಣ್ ಧವನ್ ನಾಯಕ ನಟರು. ಸೈಫ್ ಫ್ರೆಂಡ್ಲಿಯಾಗಿದ್ದರೆ, ವರುಣ್ ನಾಟಿ ಬಾಯ್, ತೆಗೆದ ಬಾಯಿ ಮುಚ್ಚುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ. ಇಬ್ಬರೂ ನಾಯಕರಿಗೂ ಇಲಿಯಾನಾ ಮನ ಸೋತಿದ್ದಾಳೆ...!