ಬಾಲಿವುಡ್ ನಟಿ ರಾಣಿ ಮುಖರ್ಜಿ ಸುತ್ತ ಹಬ್ಬಿದ್ದ ಗಾಸಿಪ್ಗಳಿಗೆ ತೆರೆಬೀಳುವ ಸಮಯ ಬಂದಿದೆ. ಹೌದು ಫೆಬ್ರವರಿ 10ರಂದು ಯಶ್ರಾಜ್ ಫಿಲಂಸ್ನ ಒಡೆಯ ಆದಿತ್ಯ ಚೋಪ್ರಾ ಜೊತೆ ಹಸೆಮಣೆ ಏರಲಿದ್ದಾರಂತೆ. ಕಳೆದ ಕೆಲ ವರ್ಷಗಳಿಂದ ಇವರಿಬ್ಬರ ನಡುವೆ ಪ್ರೇಮದಾಟ ನಡೆಯುತ್ತಿದೆ. ಈ ಜೋಡಿ ಹಕ್ಕಿಗಳು ಒಂದಾಗುತ್ತಾರೆ ಎಂಬ ಮಾತುಗಳು ಬಾಲಿವುಡ್ನಲ್ಲಿ ಕೇಳಿ ಬರುತ್ತಿದ್ದವು. ಇತ್ತೀಚೆಗೆ ಜೋಧ್ಪುರ್ ಅರಮನೆಯಲ್ಲಿ ನಡೆದ ನೀತಾ ಅಂಬಾನಿ ಹುಟ್ಟುಹಬ್ಬ ಸಂಭ್ರಮಕ್ಕೆ ರಾಣಿ ಹೋಗಿದ್ದರು. ಆ ಅರಮನೆಯ ಸೊಬಗು ಕಂಡು ಬೆರಗಾದ ಆಕೆ, ಮದುವೆ ಆದರೆ ಇಲ್ಲೇ ಆಗಬೇಕು ಎಂದು ತನ್ನ ಆಪ್ತರಲ್ಲದೆ, ಆದಿತ್ಯ ಬಳಿಯೂ ಹೇಳಿಕೊಂಡಿದ್ದಳಂತೆ. ಇದಕ್ಕೆ ಆದಿತ್ಯನೂ ಒಪ್ಪಿಕೊಂಡಿದ್ದಾನೆ ಎಂಬ ಸುದ್ದಿ ಇದೆ. ಇನ್ನೇನಿದ್ದರೂ ಗಟ್ಟಿಮೇಳ ಮೊಳಗುವುದು ಬಾಕಿ. ಬಹಳ ಸಮಯದಿಂದಿದ್ದ ಗಾಸಿಪ್ಗೆ ತೆರೆ ಬೀಳುತ್ತಿರುವುದು ಸಂತಸದ ವಿಷಯ.