ಹಾಟ್ ನಟಿ ವೀಣಾ ಮಲ್ಲಿಕ್ ವಿರುದ್ಧ ಗುರುತರ ಆರೋಪವೊಂದು ಕೇಳಿಬಂದಿದೆ. ಆರೋಪಿಸುತ್ತಿರುವವರು ಆಕೆಯ ಮಾಜಿ ಬಾಯ್ ಫ್ರೆಂಡ್ ಎಂದು ಹೇಳಿಕೊಂಡಿರುವ ಪ್ರಶಾಂತ್ ಪ್ರತಾಪ್ ಸಿಂಗ್. ತಾನು ಹಾಗೂ ವೀಣಾ ಲಿವಿಂಗ್ ಟುಗೆದರ್ನಲ್ಲಿದ್ದು, ನನ್ನಿಂದಲೇ ಗರ್ಭಿಣಿಯೂ ಆಗಿದ್ದಳು. ಆದರೆ, ನನಗೆ ತಿಳಿಸದೆಯೇ ದುಬೈಗೆ ಹೋಗಿ ಮದುವೆಯಾಗಿದ್ದಾಳೆ ಎಂದು ಆರೋಪಿಸಿದ್ದಾನೆ. ಹಾಗೆಯೇ ವೀಣಾರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮುಂಬೈನಲ್ಲಿ ದೂರು ದಾಖಲಿಸಿದ್ದಾನೆ. ಆದರೆ, ಇದನ್ನು ಕೇಳಿ ವೀಣಾ ಜೊತೆ ನಟಿಸಿರುವ ಕೆಲವು ನಾಯಕ ನಟರು ನಕ್ಕು ಸುಮ್ಮನಾದರಂತೆ!