ನಟ ಜಾನ್ ಅಬ್ರಹಾಂ ಮದುವೆಯಾಗಿದ್ದಾರೆ. ಹೌದು ಇದನ್ನು ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ನಲ್ಲಿ ಬಹಿರಂಗಪಡಿಸಿದ್ದಾರೆ. ಸುಮಾರು 9 ವರ್ಷ ಕಾಲ ಮಾದಕ ನಟಿ ಕೃಷ್ಣ ಸುಂದರಿ ಬಿಪಾಶಾ ಬಸು ಜೊತೆ ಡೇಟಿಂಗ್ ಮಾಡಿ ಸಂಬಂಧ ಕಡಿದುಕೊಂಡಿದ್ದ ಜಾನ್, ಈಗ ಸದ್ದಿಲ್ಲದೆ ತನ್ನ ಹೊಸ ಗರ್ಲ್ಫ್ರೆಂಡ್ ಪ್ರಿಯಾ ರೂಂಚಲ್ರನ್ನು ಮದುವೆಯಾಗಿದ್ದಾರೆ. ತೀರೆ ಕೆಲವೇ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಪ್ರಿಯಾ ಜೊತೆ ಕಳೆದ 3 ವರ್ಷದಿಂದ ಗೆಳೆತನವಿತ್ತು ಎನ್ನಲಾಗಿದೆ. ಈವರೆಗೂ ಜಾನ್ ಎಲ್ಲಿಯೂ ಆಕೆಯ ಜೊತೆ ಹೆಚ್ಚಿಗೆ ಕಾಣಿಸಿಕೊಂಡಿರಲಿಲ್ಲ.