'ದಿ ಡರ್ಟಿ ಪಿಕ್ಚರ್' ಬಂದ ಮೇಲೆ ವಿದ್ಯಾ ಬಾಲನ್ ಎಲ್ಲರ ಹೃದಯದಲ್ಲೂ ಕೂತಿದ್ದಾಳೆ. ಈ ಕಾರಣಕ್ಕಾಗಿಯೇ ವಿದ್ಯಾಳನ್ನೇ ಹೋಲುವ ದ್ರೌಪದಿಯ ಆ್ಯನಿಮೇಟೆಡ್ ಪಾತ್ರವನ್ನು 'ಮಹಾಭಾರತ'ವೆಂಬ ಆ್ಯನಿಮೇಷನ್ ಚಿತ್ರದಲ್ಲಿ ಸೃಷ್ಟಿಸಲಾಗಿದೆ. ವಿದ್ಯಾಳ ಕಂಠವೇ ಈ ಪಾತ್ರಕ್ಕೆ ಉತ್ತಮವೆಂದೂ ನಿರ್ಮಾಪಕರು ನಿರ್ಧರಿಸಿದ್ದಾರಂತೆ. ಈಕೆಯ ಹಾಲುಗಲ್ಲವೇ ಈ ಪಾತ್ರಕ್ಕೆ ಪೂರಕವಾಯ್ತೇನೋ ಎಂಬುದು ಅಭಿಮಾನಿಗಳ ಶಂಕೆ. ಅಲ್ಲದೆ ಈ ಆ್ಯನಿಮೇಟೆಡ್ ಚಿತ್ರದಲ್ಲಿ ಭೀಷ್ಮ ಪಿತಾಮಹನ ಪಾತ್ರಕ್ಕೆ ಅಮಿತಾಭ್ ಬಚ್ಚನ್ ಅವರ ಧ್ವನಿ ಕೊಡಲಾಗಿದೆಯಂತೆ. ಕರ್ಣನಿಗೆ ಅನಿಲ್ ಕಪೂರ್, ಭೀಮನಿಗೆ ಸನ್ನಿ ಡಿಯೋಲ್, ಅರ್ಜುನನಿಗೆ ಅಜಯ್ ದೇವಗನ್, ಮನೋಜ್ ಬಾಜ್ಪೆಯ್ ಯುಧಿಷ್ಟರನ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಬೆಳ್ಳಿತೆರೆಯಲ್ಲಿ ಈಕೆಯ ಆ್ಯನಿಮೇಟೆಡ್ ಪಾತ್ರವನ್ನು ಮತ್ತು ಈಕೆಯ ಮಧುರ ಕಂಠವನ್ನು ಆಸ್ವಾದಿಸಲು ಅಭಿಮಾನಿಗಳು ಕಾಯಬೇಕಾಗಿದೆ.