'ರಾಮ್ ಲೀಲಾ'ದಲ್ಲಿ ರಣವೀರ್ ಜೊತೆ ನಟಿಸಿದ ನಂತರ ದೀಪಿಕಾ ಪಡುಕೋಣೆ ಹಲವು ಗಾಳಿ ಸುದ್ದಿಗೆ ಒಳಗಾಗಿದ್ದಳು. ರಣವೀರ್ ಸಿಂಗ್ ಜೊತೆ ಅಫೇರ್ ಇದೆ ಎಂಬ ಗುಲ್ಲು ಬಾಲಿವುಡ್ ತುಂಬೆಲ್ಲಾ ಪಸರಿಸಿತ್ತು. ಅತ್ತ ರಣಬೀರ್ ಕಪೂರ್, ಕತ್ರೀನಾ ಜೊತೆ ಸುತ್ತುತ್ತಿದ್ದರೆ ಇತ್ತ ದೀಪಿಕಾ ರಣವೀರ್ಗೆ ಜೊತೆಯಾಗಿದ್ದಾಳೆ ಎಂದೆಲ್ಲಾ ಆಡಿಕೊಂಡು ನಕ್ಕಿದ್ದೂ ಆಯಿತು. ಆದರೆ, ದೀಪಿಕಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಜನವರಿ 5ಕ್ಕೆ 28 ವರ್ಷಕ್ಕೆ ಕಾಲಿರಿಸಿರುವ ದೀಪಿಕಾ ತಾನಿನ್ನು ಒಬ್ಬಂಟಿ ಎಂದು 'ಕಾಫಿ ವಿತ್ ಕರಣ್' ಜೊತೆ ಹೇಳಿದ್ದಾಳೆ. 'ರಣಬೀರ್ ಹಾಗೂ ರಣವೀರ್ ಜೊತೆ ತನ್ನ ನಂಟು ಬೆಸೆದು ಚಿತ್ರಿಸಿದ ಮಾಧ್ಯಮಗಳಿಗೆ ಸೊಪ್ಪು ಹಾಕುವುದಿಲ್ಲ.' ಎಂದು ಖಡಕ್ ಆಗಿ ಹೇಳಿದ್ದಾಳೆ.