ಇತ್ತೀಚೆಗೆ ತಾನು ಹುಟ್ಟಿರುವುದು ಮದುವೆ ಮಾಡಿಕೊಳ್ಳುವುದಕ್ಕಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಅನುಷ್ಕಾ ಟಾಲಿವುಡ್ನಲ್ಲಿ ಸುದ್ದಿಯಾಗಿದ್ದರು. ಮಾಡುವುದಕ್ಕೆ ಕೆಲಸಗಳೂ ಬೇಕಾದಷ್ಟಿವೆ ಎಂದಿದ್ದಳು. ಅದಕ್ಕೆ ತಕ್ಕಂತೆ ಕೈ ತುಂಬ ಅವಕಾಶಗಳು ಇದ್ದರೂ ಮತ್ತೆರಡು ಚಿತ್ರಗಳಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾಳೆ. ಇನ್ನು ಎರಡು ವರ್ಷ ಯಾವ ಚಿತ್ರಗಳನ್ನೂ ಒಪ್ಪಿಕೊಳ್ಳಲು ಅನುಷ್ಕಾಳಿಗೆ ಸಾಧ್ಯವೇ ಇಲ್ಲ ಎನ್ನುತ್ತಿದ್ದ ಟಾಲಿವುಡ್ ಮಂದಿ, ಈಗ ಎರಡು ಹೊಸ ಚಿತ್ರಗಳಿಗೆ ಸಹಿ ಮಾಡಿರುವುದನ್ನು ಕಂಡು ಬೆರಗಾಗಿದ್ದಾರೆ. ತೆಲುಗಿನ ಅಶೋಕ್ ನಿರ್ದೇಶನದ ಭಾಗಮತಿ ಹಾಗೂ ಗೌತಮ್ ಮೆನನ್ ಅವರ ಹೊಸ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿದೆಯಂತೆ. ಅನುಷ್ಕಾ ಕೆರಿಯರ್ ಮುಗಿದೇ ಹೋಯಿತು, ಮದುವೆಯಾಗಿ ಹಾಯಾಗಿರಲಿ ಎಂದು ಮಾತನಾಡಿಕೊಳ್ಳುವವರಿಗೆ, ಅನುಷ್ಕಾ ತಾನಿನ್ನೂ ಬೇಡಿಕೆಯಲ್ಲಿರುವ ನಟಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾಳೆ.