ಟೈಟಾನಿಕ್ ಹೀರೊನ ಟೈಟ್ ಹಗ್ಗು ಕಿಸ್ಸುಗಳಿಂದ ಬೆಚ್ಚಗಾಗಿ ಬೆವರಿ ಹೋಗಿರುವ ನಟಿ ಮಾರ್ಗೊಟ್ ರೊಬ್ಬೀ, ಲಿಯೊನಾರ್ಡೊ ಡಿಕ್ಯಾಪ್ರಿಯೋಗೆ 'ಗ್ರೇಟ್ ಕಿಸ್ಸರ್' ಅಂತ ಸರ್ಟಿಫಿಕೇಟ್ ನೀಡಿದ್ದಾಳೆ. ಆದರೆ, ಈ ಸರ್ಟಿಫಿಕೇಟ್ ತೆರೆಯ ಮೇಲಿನ ನಟನೆಗೆ ಮಾತ್ರ ಸಂಬಂಧಿಸಿದ್ದಂತೆ. ಕಳೆದ ವಾರ ಬಿಡುಗಡೆಯಾಗಿ ಫೇಸ್ಬುಕ್ 'ವಾಲ್'ಗಳಲ್ಲಿ ಹಾಲಿವುಡ್ 'ಸ್ಟ್ರೀಟ್'ಗಳಲ್ಲಿ ಹವಾ ಎಬ್ಬಿಸಿರುವ ಚಿತ್ರ 'ವುಲ್ಫ್ ಆಫ್ ವಾಲ್ ಸ್ಟ್ರೀಟ್'ನ ನಾಯಕಿ ರೊಬ್ಬೀಗೀಗ, ಡಿಕ್ಯಾಪ್ರಿಯೋ ಜತೆಗಿನ ಪ್ರಣಯ ಸನ್ನಿವೇಶಗಳ ಅನುಭವ ಹೇಳಬೇಕೆಂದು ಆಕೆಯ ಗೆಳತಿಯರು ಗೋಳುಹೊಯ್ದುಕೊಳ್ಳುತ್ತಿದ್ದಾರಂತೆ. ಆದರೆ, ತೆರೆಯ ಮೇಲೆ ಲಿಪ್ಲಾಕ್ ಮಾಡಿ, ತೆರೆಯಾಚೆ ಆತ ನನ್ನ 'ಅಣ್ಣನ ಸಮಾನ' ಅಂತ ಕಾಗೆ ಹಾರಿಸ್ತಿರೋ ಮಾರ್ಗೊಟ್ಳ ಮಾತು ನಂಬೋಕೆ 'ನಾವೇನು ಕಿವೀಲಿ ಹೂವಿಟ್ಕೊಂಡಿಲ್ಲ' ಅಂತಿದಾರೆ ಆಕೆಯ ಫ್ರೆಂಡ್ಸ್!