ಸ್ಟಾರ್ಪ್ಲಸ್ನಲ್ಲಿ 'ಸತ್ಯಮೇವ ಜಯತೆ-2' ನಿನ್ನೆಯಿಂದ ಪ್ರಸಾರ ಆರಂಭಿಸಿದೆ. ಮುಂದಿನ ನಾಲ್ಕು ಭಾನುವಾರ ವೀಕ್ಷಕರಿಗೆ ಆಮೀರ್ ಖಾನ್ರನ್ನು ಕಿರುತೆರೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ. 'ಸತ್ಯಮೇವ ಜಯತೆಯಲ್ಲಿ ನಾನು ಕಿರುಚಾಡಿದ್ದು ಅತಿಯಾಯಿತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ನಾನೇನು ಮಾಡಲಿ? ನಾನು ಇರುವುದೇ ಹಾಗೆ' ಎಂದಿದ್ದಾನೆ ಆಮೀರ್. ವೀಕ್ಷಕರಲ್ಲಿ ವಿಷಯದ ಗಂಭೀರತೆಯ ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿ ಕಾರ್ಯಕ್ರಮ ಸ್ವರೂಪದಲ್ಲಿ ಕೊಂಚಮಟ್ಟಿನ ಬದಲಾವಣೆ ಮಾಡಿಕೊಂಡಿರುವುದಾಗಿಯೂ ಆಮೀರ್ ಹೇಳಿದ್ದಾನೆ. ಯೂಟ್ಯೂಬ್ನಲ್ಲಿ 'ಸತ್ಯಮೇವ ಜಯತೆ-2'ರ ಪ್ರೊಮೊ ಬಿಡುಗಡೆಯಾದ ದಿನವೇ 34,000 ಹಿಟ್ ಪಡೆದದ್ದು ಕಾರ್ಯಕ್ರಮದ ಯಶಸ್ಸಿನ ಮುನ್ಸೂಚನೆ ಎನ್ನುವುದು ಉದ್ಯಮ ಪಂಡಿತರ ಲೆಕ್ಕಾಚಾರ.