ಅದು 2007. ಇಂಡಿಯನ್-ಅಮೆರಿಕನ್ ಫಿಲ್ಮಮೇಕರ್ ರಿತೇಶ್ ಬಾತ್ರಾ ಮುಂಬೈನಲ್ಲಿ ಕಾರ್ಯಾಚರಿಸುತ್ತಿದ್ದ 'ಡಬ್ಬವಾಲಾ'ಗಳನ್ನು ನೋಡಿ ಚಕಿತರಾಗಿದ್ದರು. ಡಬ್ಬವಾಲಾಗಳ ಕುರಿತಾಗಿ ಒಂದು ಡಾಕ್ಯುಮೆಂಟರಿ ಮಾಡಬೇಕು ಎಂಬ ಆಸಕ್ತಿ ವಹಿಸಿದ್ದರು. ಆ ಕನಸೇ ಮುಂದೆ 'ದಿ ಲಂಚ್ ಬಾಕ್ಸ್' ಸಿನೆಮಾ ಆಗಿ ಪರಿವರ್ತನೆಗೊಂಡಿತು. ಬಾತ್ರಾ ಡಬ್ಬವಾಲಾಗಳ ನಡುವೆ ಇರಬಹುದಾದ ಕತೆಯನ್ನು ಕೇಳಲು ಅವರನ್ನು ಸ್ನೇಹಿತರನ್ನಾಗಿಸಿಕೊಂಡರಂತೆ. ಅವರು ಲಂಚ್ ಬಾಕ್ಸ್ಗಳನ್ನು ನೀಡುತ್ತಿದ್ದ ಹೆಂಗಸರ ಕುರಿತಾಗಿ ಕತೆಗಳನ್ನು ಹೇಳುತ್ತಿದ್ದರಂತೆ. ಆ ಕತೆಗಳಲ್ಲೇ ಒಳ್ಳೆಯ ಕತೆಯೊಂದನ್ನು ಹೆಕ್ಕಿ ಪೋಣಿಸಿ ರುಚಿಯಾದ ಔತಣವಿರುವ ಲಂಚ್ಬಾಕ್ಸ್ ತಯಾರು ಮಾಡಿದ್ದರು ಬಾತ್ರಾ. ಆ ಚಿತ್ರ ಈಗ ಅಮೆರಿಕ ಮುಂತಾದ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ.