ಬಾಲಿವುಡ್

ಆಹಾ ಈ ನೇಹಾ

ನಟಿ ನೇಹಾ ಅಂದಾಕ್ಷಣ ಜೊತೆಗೆ ಪಾಟೀಲ್ ಸೇರಿಸಿಕೊಂಡು 'ನೇಹಾ ಪಾಟೀಲ್‌' ಅಂತ ಹೇಳಬೇಡಿ...

ನಟಿ ನೇಹಾ ಅಂದಾಕ್ಷಣ ಜೊತೆಗೆ ಪಾಟೀಲ್ ಸೇರಿಸಿಕೊಂಡು 'ನೇಹಾ ಪಾಟೀಲ್‌' ಅಂತ ಹೇಳಬೇಡಿ. ಆ ಪಾಟೀಲ್‌ಗೂ ಈ ನೇಹಾಗೂ ಅಂಥದ್ದೇನು ಸಂಬಂಧವಿಲ್ಲ. ಆರಂಭದ ಎರಡು ಅಕ್ಷರಗಳು ಒಂದೇ ಎನ್ನುವುದು ಬಿಟ್ಟರೆ ಈ ಇಬ್ಬರು ನೇಹಾಗಳು ಭಿನ್ನ ವಿಭಿನ್ನ.
ಅಂದಹಾಗೆ ಈಕೆ ನೇಹಾ ಸಕ್ಸೆನಾ. ಹೆಸರಿನಲ್ಲೇ 'ಸೆಕ್ಸೆ'ನಾ ಹೊಂದಿರುವ ಈಕೆ ಒಂಚೂರು ಬೋಲ್ಡ್ ಆಂಡ್ ಹಾಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಎತ್ತರಕ್ಕೆ ತಕ್ಕಂತೆ ಚೆಂದ, ಬ್ಯೂಟಿಗೆ ತಕ್ಕ ಔಟ್‌ಲುಕ್ ಎನಿಸಿಕೊಂಡಿರುವ ಈ ನೇಹಾ ಸಕ್ಸೆನಾ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಲೇ, ರ್ಯಾಂಪ್ ಮೇಲೆಯೂ ಕ್ಯಾಟ್‌ವಾಕ್ ಮಾಡಿದ್ದಾರೆ. ಆದರೆ, ಈಕೆ 'ಜಸ್ಟ್ ಲವ್‌' ಚಿತ್ರದ ಮೂಲಕ ಗಾಂಧಿನಗರಕ್ಕೆ ಹೆಚ್ಚು ಪರಿಚಿತಗೊಂಡ ಪಂಜಾಬಿ ಹುಡುಗಿ.
ಕ್ಲಬ್ ಮಹೇಂದ್ರ ಹಾಲಿಡೇನಲ್ಲಿ ಬೆಂಗಳೂರು ಬ್ರ್ಯಾಂಚ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಈ ಹುಡುಗಿ ಮಾಡೆಲಿಂಗ್ ಲೋಕದಲ್ಲೂ ಗುರುತಿಸಿಕೊಂಡವಳು. ಆ ಮಾಡೆಲಿಂಗ್ ಜಗತ್ತೇ ಸಿನಿಮಾ ಪ್ರಪಂಚದವರೆಗೂ ಕರೆತಂದಿದೆ. ನಟ ಪ್ರಜ್ವಲ್ ದೇವರಾಜ್ ಹಾಗೂ ಮಾಜಿ ಸಂಸದೆ ರಮ್ಯಾ ಅಭಿನಯದ 'ದಿಲ್ ಕಾ ರಾಜ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಈಕೆ, 'ಶ್ರಾವಣಿ ಸುಬ್ರಮಣ್ಯ', 'ದಂಡು', 'ವಿಜಿ', 'ಕ್ಯೂ' ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನ 'ರಿಕ್ಷಾ ಡ್ರೈವರ್‌' ಹಾಗೂ ತಮಿಳಿನ 'ಉತ್ತಮ್ ತಿರುಧನ್‌' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ 'ಜಸ್ಟ್ ಲವ್‌', 'ಶ್ರಾವಣಿ ಸುಬ್ರಮಣ್ಯ' ಹಾಗೂ 'ರಿಕ್ಷಾ ಡ್ರೈವರ್‌' ಚಿತ್ರಗಳು ಬಿಡುಗಡೆಯಾಗಿವೆ. ಈ ಎಲ್ಲ ಚಿತ್ರಗಳ ಪೈಕಿ ಜೈಕಾರ್ತಿಕ್ (ಜೆಕೆ) ನಾಯಕನಾಗಿ ಅಭಿನಯಿಸಿರುವ 'ಜಸ್ಟ್ ಲವ್‌' ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು ಎನ್ನುವುದು ನೇಹಾಳ ಮಾತು.
ಮೂಲತಃ ಪಂಜಾಬಿ ಹುಡುಗಿಯಾಗಿರುವ ಈಕೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಮಾಡೆಲಿಂಗ್ ಲೋಕಕ್ಕೆ ಸಲ್ಲಬೇಕು. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಇಲ್ಲಿವರೆಗೂ 9 ಚಿತ್ರಗಳಲ್ಲಿ ನಟಿಸಿರುವ ನೇಹಾಳಿಗೆ ಗ್ಲಾಮರ್ ಪಾತ್ರಗಳೆಂದರೆ ಅಚ್ಚುಮೆಚ್ಚು. 'ನಾನು ಚಿತ್ರರಂಗಕ್ಕೆ ಬರುವ ಮುನ್ನ ರ್ಯಾಂಪ್ ಶೋಗಳಲ್ಲಿ ಕಾಣಿಸಿಕೊಂಡಿದ್ದೇನೆ. ಹತ್ತಾರು ಜಾಹೀರಾತುಗಳಿಗೆ ಮಾಡೆಲ್ ಆಗಿದ್ದೆ. ಈ ಕಾರಣಕ್ಕೆ ನಾನು ಗ್ಲಾಮರ್ ಪಾತ್ರಗಳಿಗೆ ಹೆಚ್ಚು ಹೊಂದಾಣಿಕೆಯಾಗುತ್ತೇನೆ. ಆದರೆ, ಪಾತ್ರ ಯಾವುದೇ ಕೊಟ್ಟರೂ ನಟಿಸಬಲ್ಲೆ. ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ' ಎನ್ನುತ್ತಾಳೆ ನೇಹಾ. ಇನ್ನು ತೆಲುಗಿನ 'ರಿಕ್ಷಾ ಡ್ರೈವರ್‌' ಚಿತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಗಿಟ್ಟಿಸಿಕಂಡಿರುವ ನೇಹಾ, ಈಗ ನವೀನ್ ಕೃಷ್ಣ ಅಭಿನಯದ 'ವಿಜಿ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ನವೀನ್ ಜೊತೆ ಅಭಿನಯಿಸುತ್ತಿರುವುದಕ್ಕೆ ಖುಷಿ ಇದೆ. ತುಂಬಾ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಇದರ ಜೊತೆಗೆ ಇನ್ನೂ ಮೂರು ಕನ್ನಡ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯದಲ್ಲೇ ಆ ಚಿತ್ರಗಳು ಸೆಟ್ಟೇರಲಿವೆ. 'ವಿಜಿ' ಚಿತ್ರಕ್ಕೆ ಶೇ.70 ಭಾಗ ಚಿತ್ರೀಕರಣ ಮುಗಿದಿದೆ. ತುಂಬಾ ನಿರೀಕ್ಷೆ ಇಟ್ಟುಕೊಂಡು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ' ಎನ್ನುವ ನೇಹಾ, ತಾನು ನಟಿಸಿರುವ ಚಿತ್ರಗಳು ಒಂದೊಂದಾಗಿ ಬಿಡುಗಡೆಯಾಗುತ್ತಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸುತ್ತಾರೆ.
ಮಾಡೆಲಿಂಗ್ ಜಗತ್ತಿಗೆ ಕಾಲಿಡುವ ಮೊದಲೇ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯೊಂದಿಗೆ ಬೆಂಗಳೂರಿಗೆ ಬಂದಿರುವ ನೇಹಾ ಸಕ್ಸೆನಾ ಹೆಸರಿಗೆ ತಕ್ಕಂತೆ ಎಂಥದ್ದೇ ಬೋಲ್ಡ್ ಪಾತ್ರವನ್ನೂ ಸುಲಭವಾಗಿ ನಿಭಾಯಿಸುವ ಜಾಣ್ಮೆ ಇದೆ ಎನ್ನುವುದು ನೇಹಾಳಿಗೆ ವೃತ್ತಿಗೆ ಅಂಟಿಕೊಂಡಿರುವ ಪಾಸಿಟೀವ್ ಪಾಯಿಂಟ್.

-ಆರ್.ಕೇಶವಮೂರ್ತಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!