ಮುಂಬೈ: "ಇಂಡಿಯಾಸ್ ರಾ ಸ್ಟಾರ್' ಎಂಬ ರಿಯಾಲಿಟಿ ಶೋನಲ್ಲಿ ತುಂಡುಡುಗೆ ತೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರು ಮಾಡೆಲ್ ಹಾಗು ನಟಿ ಗೌಹಾರ್ ಖಾನ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಗೊರೆಗಾಂವ್‌ನ ಫಿಲ್ಮ್ ಸಿಟಿಯಲ್ಲಿ ರಿಯಾಲಿಟಿ ಶೋ ನಡೆಯುತ್ತಿದ್ದು, ಗೌಹಾರ್ ಖಾನ್ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. ಶೋ ಮಧ್ಯಾಂತರದಲ್ಲಿ ಸ್ಟೇಜ್‌ಗೆ ನುಗ್ಗಿದ ಮೊಹಮ್ಮದ್ ಅಖಿಲ್ ಮಲ್ಲಿಕ್ (24) ಎಂಬಾತ ಗೌಹಾರ್ ಖಾನ್‌ಗೆ ಕೆನ್ನೆಗೆ ಹೊಡೆದಿದ್ದಾನೆ. ಕೂಡಲೇ ಸೆಕ್ಯೂರಿಟಿ ಗಾರ್ಡ್‌ಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ,
ಮುಸ್ಲಿಂ ಸಮುದಾಯಕ್ಕೆ ಸೇರಿರುವ ಯುವತಿ ಇಂಥಾ ತುಂಡುಡುಗೆ ಧರಿಸುವುದು ಸರಿಯಲ್ಲ ಎಂಬ ಕಾರಣದಿಂದಲೇ ಗೌಹಾರ್‌ಗೆ ಕಪಾಳಮೋಕ್ಷ ಮಾಡಿದ್ದೇನೆ ಎಂದು ಮಲ್ಲಿಕ್ ಹೇಳಿದ್ದಾನೆ.
ಶೋ ನಡೆಯುವಾಗ ಸ್ಥಳದಲ್ಲಿ ಸುಮಾರು 2,500ರಷ್ಟು ಸಭಿಕರು ಪಾಲ್ಗೊಂಡಿದ್ದರು. ಅದರಲ್ಲಿ ಸೆಕ್ಯೂರಿಟಿಯ ಕಣ್ತಪ್ಪಿಸಿ ಮಲ್ಲಿಕ್ ಸ್ಟೇಜ್ ಮೇಲೆ ಹತ್ತಿ ಗೌಹಾರ್‌ಖಾನ್‌ಳನ್ನು ಬೈದು ಹಲ್ಲೆ ನಡೆಸಿದ್ದನು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ