ಕತ್ರಿನ ಮತ್ತು ರಣಬೀರ್ 
ಬಾಲಿವುಡ್

'ರಜಾ-ಮಜಾ'ಗಾಗಿ ಮಾಲ್ಡಿವ್ಸ್ ಗೆ ಬಂದಿಳಿದ ರಣಬೀರ್ ಕತ್ರಿನಾ ಜೋಡಿ

ಬಾಲಿವುಡ್ ಜೋಡಿಗಳ ವದಂತಿ ಪತ್ರಿಕೆಗಳ ತಲೆಬರಹವಾಗುವುದೇನೂ ಹೊಸದಲ್ಲ. ಈಗ ಬಾಲಿವುಡ್ ಜೋಡಿ ರಣಬೀರ್

ಮುಂಬೈ: ಬಾಲಿವುಡ್ ಜೋಡಿಗಳ ವದಂತಿ ಪತ್ರಿಕೆಗಳ ತಲೆಬರಹವಾಗುವುದೇನೂ ಹೊಸದಲ್ಲ. ಈಗ ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಕತ್ರಿನ ಕೈಫ್ ತಮ್ಮ ಕೆಲಸದಿಂದ ವಿರಾಮ ತೆಗೆದುಕೊಂಡು ಪ್ರವಾಸಕ್ಕಾಗಿ ಮಾಲ್ಡಿವ್ಸ್ ದ್ವೀಪಕ್ಕೆ ಹಾರಿದ್ದಾರೆ.

ಮಾಲ್ಡಿವ್ಸ್ ನಲ್ಲಿ ವಿಮಾನ ಭೂಸ್ಪರ್ಷ ಮಾಡಿದಾಗ ಕತ್ರಿನಾ-ರಣಬೀರ್ ಜೋಡಿ ಒಟ್ಟಿಗೆ ಇರುವುದು ಕಂಡುಬಂದಿದೆ.

ಬಾಲಿವುಡ್ ನಲ್ಲಿ ಕೈತುಂಬಾ ಕೆಲಸ ಇರುವ ಈ ಇಬ್ಬರೂ ನಟ ನಟಿಯರು ಮದುವೆಯಾಗುತ್ತಾರೆ ಎಂಬ ವದಂತಿಗಳು ಇತ್ತೀಚೆಗೆ ದಟ್ಟವಾಗಿದ್ದವು. ಕತ್ರಿನಾ ಸದ್ಯಕ್ಕೆ 'ಫಿತೂರ್' ಮತ್ತು 'ಜಗ್ಗ ಜಾಸೂಸ್' ಚಲನಚಿತ್ರಗಳಲ್ಲಿ ನಿರತರಾಗಿದ್ದರೆ, ರಣಬೀರ್ 'ಬಾಂಬೆ ವೆಲ್ವೆಟ್' ಮತ್ತು 'ತಮಾಶಾ' ಚಿತ್ರಗಳಲ್ಲಿ ಕಾರ್ಯನಿರತರಾಗಿದ್ದಾರೆ.

ಇದಕ್ಕೂ ಮುಂಚೆ ವಿರಾಮಕ್ಕೆಂದು ಸ್ಪೇನ್ ಗೆ ತೆರಳಿದ್ದ ಈ ಜೋಡಿ, ಅಲ್ಲಿನ ಅಭಿಮಾನಿಗಳ ಆಕರ್ಷಣೆಯಾಗಿದ್ದರು.

ಇತ್ತೀಚಿಗೆ ಕಪೂರ್ ಕುಟುಂಬದ ಒಂದುಗೂಡಿದ್ದ ಒಂದು ಕಾರ್ಯಕ್ರಮದಲ್ಲಿ ಕತ್ರಿನಾ ಕಂಡುಬಂದಿದ್ದರು. ಮುಂಬೈನ ಐಶಾರಾಮಿ ಹೋಟೆಲೊಂದರಲ್ಲಿ ಇಡಿ ಕುಟುಂಬ ಊಟ ಮಾಡಿದ್ದು, ಅದರಲ್ಲಿ ಕತ್ರಿನಾ ಭಾಗಿಯಾಗಿದ್ದು ವರದಿಯಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT