ಪ್ರಿಯಾಂಕಾ ಚೋಪ್ರಾ 
ಬಾಲಿವುಡ್

ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ: ಪ್ರಿಯಾಂಕಾ ಚೋಪ್ರಾ

ಹಣ ಮತ್ತು ಖ್ಯಾತಿಗಾಗಿ ದಿನದ 16 ತಾಸುಗಳಷ್ಟು ಸಮಯವನ್ನು ಕೆಲಸಕ್ಕಾಗಿಯೇ ಮೀಸಲಿಡುತ್ತಿದ್ದೇನೆ. ಜೀವನದಲ್ಲಿ...

ಮುಂಬೈ: ಹಣ ಮತ್ತು ಖ್ಯಾತಿಗಾಗಿ ದಿನದ 16 ತಾಸುಗಳಷ್ಟು ಸಮಯವನ್ನು ಕೆಲಸಕ್ಕಾಗಿಯೇ ಮೀಸಲಿಡುತ್ತಿದ್ದೇನೆ. ಜೀವನದಲ್ಲಿ ಮನರಂಜನೆ ಪಡೆಯಲು ಸಮಯವೇ ಇಲ್ಲ ಎಂದು ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಹೆಸರು ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜನಪ್ರಿಯ. ಅಮೆರಿಕದ ಜನಪ್ರಿಯ ಟಿವಿ ಶೋ ಕ್ವಾಂಟಿಕೋ ಮೂಲಕ ಇನ್ನಷ್ಟು ಹೆಸರು ಗಳಿಸಿದ್ದಾರೆ.

ಯಶಸ್ಸು ಒಂದು ತಾಣವಲ್ಲ. ಯಶಸ್ಸು ಒಂದು ಪ್ರಯಾಣ. ನೀವು ಸತತವಾಗಿ ಯಶಸ್ಸು ಗಳಿಸುತ್ತಾ ಹೋದರೆ ಜೀವನದಲ್ಲಿ ಯಶಸ್ವಿ ಎಂದು ಪರಿಗಣಿಸಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಜೀವನದಲ್ಲಿ ಹಣ ಮುಖ್ಯವಾಗುತ್ತದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಪ್ರಿಯಾಂಕಾ, ನಾನು ಶ್ರಮಪಟ್ಟು ಕೆಲಸ ಮಾಡಿ ಹಣವನ್ನು ಸಂಪಾದಿಸುತ್ತೇನೆ.ಕೆಲಸದ ಒತ್ತಡದಿಂದ ರಾತ್ರಿ ಕೂಡ ಸರಿಯಾಗಿ ನಿದ್ರಿಸುವುದಿಲ್ಲವಂತೆ. ವಾರಾಂತ್ಯ ಪಾರ್ಟಿ,ದೀಪಾವಳಿ, ಬರ್ತ್‌ಡೇ  ಆಚರಿಸಿಯೇ ಇಲ್ಲ' ಎಂದಿದ್ದಾರೆ.

ತಮ್ಮ ಮುಂದಿನ ಹೆಜ್ಜೆ ಹಾಲಿವುಡ್ಡಾ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ 34 ವರ್ಷದ ಈ ನಟಿ, ಕಳೆದ 5 ವರ್ಷಗಳಿಂದ ನನಗೆ ಅಮೆರಿಕದಲ್ಲಿ ಏಜೆಂಟ್ ವೊಬ್ಬರ ಸಂಪರ್ಕವಿದೆ. ಆದರೆ ನನ್ನ ಸ್ವಂತ ಶಕ್ತಿಯಿಂದ ನಾನು ಗುರುತಿಸಿಕೊಳ್ಳಲು ಇಚ್ಚಿಸುತ್ತೇನೆ. ಬಾಲಿವುಡ್ ನಲ್ಲಿ ನನಗೊಂದು ಸ್ಥಾನವಿದೆ. ಹಾಲಿವುಡ್ ನಲ್ಲಿ ನನಗೆ ತುಂಬಾ ಖುಷಿ ಕೊಡುವ ಪಾತ್ರ ಸಿಕ್ಕರೆ ಮಾಡುತ್ತೇನೆ ಎನ್ನುತ್ತಾರೆ.
 
ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಸ್ನೇಹಿತೆಯಾಗಿದ್ದು ತಾವು ಆಗಾಗ ಭೇಟಿಯಾಗುತ್ತಿರುತ್ತೇವೆ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!