ಕೋಲ್ಕೊತಾ: ದಿಲ್ ವಾಲೆ ಚಿತ್ರ ವೀಕ್ಷಣೆಗೆ ಪ್ರೇಕ್ಷಕರು ಸಿನಿಮಾ ಮಂದಿಗಳಿಗೆ ಹೆಚ್ಚಾಗಿ ಬರುತ್ತಿಲ್ಲವಾದ್ದರಿಂದ ನಟ ಶಾರೂಖ್ ಖಾನ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಕ್ಷಮೆ ಕೋರಬೇಕಾದಂಥ ಯಾವುದೇ ಹೇಳಿಕೆ ನೀಡಿಲ್ಲ. ಬಾಲಿವುಡ್ ನಟ ಶಾರೂಖ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಸಹಿಷ್ಣುತೆ ಕುರಿತ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ತಪ್ಪಾಗಿ ಗ್ರಹಿಸಿದವರು ನಡೆಸಿದ ಪ್ರತಿಭಟನೆಯಿಂದ ಚಿತ್ರಕ್ಕೆ ಹೊಡೆತ ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನಾನು ಕ್ಷಮೆ ಕೋರುವಂತ ಹೇಳಿಕೆ ನೀಡಿದಿದ್ದರೇ , ನನ್ನ ತಪ್ಪಿನ ಅರಿವು ಮೊದಲು ನನಗೆ ಆಗುತ್ತಿತ್ತು. ಹಾಗೊಂದು ವೇಳೆ ಯಾರಿಗಾದರೂ ಬೇಸರವಾಗಿದ್ದರೆ, ಕ್ಷಮೆ ಯಾಚಿಸುತ್ತೇನೆ. ದಯವಿಟ್ಟು ಚಿತ್ರ ನೋಡಿ, ಆನಂದಿಸಿ. ಚಿತ್ರ ನನ್ನೊಬ್ಬನದಲ್ಲ, ಸಾವಿರಾರು ಮಂದಿಯ ಪರಿಶ್ರಮ ಇದೆ,'ಶಾರುಖ್ ಮನವಿ ಮಾಡಿದ್ದಾರೆ.
'25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಜಾತಿ, ಧರ್ಮ, ಪ್ರಾಂತ್ಯ, ವರ್ಗ, ಲಿಂಗ ಭೇದವಿಲ್ಲದೆ ಈ ದೇಶದ ಜನ ನನಗೆ ಅಪಾರ ಪ್ರೀತಿ, ವಿಶ್ವಾಸ ತೋರಿದ್ದಾರೆ. ನನ್ನ ಚಿತ್ರ ಜನರನ್ನು ತಲುಪದಿದ್ದಾಗ ಬಹಳ ಬೇಸರ ಆಗುವುದು. ಜನರ ಪ್ರೀತಿಯನ್ನು ಹಿಂದಿರುಗಿಸಲು ಇರುವ ಏಕೈಕ ಮಾರ್ಗ ಚಿತ್ರವೊಂದೆ, ದಯವಿಟ್ಟು ಚಿತ್ರ ನೋಡಿ,' ಎಂದು ಶಾರುಕ್ ಅಭಿಮಾನಿಗಳನ್ನು ಮನವಿ ಮಾಡಿದ್ದಾರೆ.