ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ಚಿತ್ರನಟಿ ಸಾಧನ(74) ಅವರು ವಿಧಿವಶರಾಗಿದ್ದಾರೆ.
1960 ಮತ್ತು 70 ರ ದಶಕದಲ್ಲಿ ಖ್ಯಾತ ನಟಿಯಾಗಿದ್ದ ಸಾಧನ ಅವರು ‘ಲವ್ ಇನ್ ಶಿಮ್ಲಾ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು.
1941ರ ಸೆಪ್ಟೆಂಬರ್ 2ರಂದು ವಿಭಜನೆ ಪೂರ್ವ ಭಾರತದ ಕರಾಚಿಯಲ್ಲಿ ಜನಿಸಿದ್ದ ಸಾಧನಾ ಶಿವದಾಸನಿ 1959 ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ‘ಪ್ರೇಮ್ ಪತ್ರ’, ’ಹಮ್ ದೋನೋ’, ‘ಆರಜೂ’, ‘ಏಕ್ ಫೂಲ್ ದೋ ಮಾಲೀ’, ‘ವಕ್ತ್’ ಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದರು.