ಬಾಲಿವುಡ್

'ಮಸ್ತಿಜಾದೆ' ವಯಸ್ಕರ ಹಾಸ್ಯ ಚಿತ್ರ: ಸನ್ನಿ ಲಿಯೋನ್

Guruprasad Narayana

ಮುಂಬೈ: ತಮ್ಮ ಮುಂದಿನ ಚಿತ್ರ 'ಮಸ್ತಿಜಾದೆ', "ಸೆಕ್ಸ್ ಹಾಸ್ಯ ಚಿತ್ರ ಅಲ್ಲ ಬದಲಾಗಿ ವಯಸ್ಕರ ಹಾಸ್ಯ ಚಿತ್ರ" ಎಂದು ಮಾಜಿ ಕೆನಡಿಯನ್ ಪೋರ್ನ್ ನಟಿ ಮತ್ತು ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಸ್ಪಷ್ಟೀಕರಿಸಿದ್ದಾರೆ.

"ನಾನು ಎಲ್ಲರಿಗೂ ಹೇಳಬಯಸುವುದೇನೆಂದರೆ 'ಮಸ್ತಿಜಾದೆ' ಸೆಕ್ಸ್ ಕಾಮಿಡಿ ಅಲ್ಲ, ಇದು ವಯಸ್ಕರಿಗಾಗಿ ನಿರ್ಮಿಸಿರುವ ವಯಸ್ಕರ ಹಾಸ್ಯ ಚಿತ್ರ, ಸೆನ್ಸಾರ್ ಮಂಡಲಿ ಬಗ್ಗೆ ಹೇಳುವುದಾದರೆ.. ಮಂಡಲಿ ತನ್ನ ಕೆಲಸ ಮಾಡುತ್ತಿದೆ ಮತ್ತು ನಮ್ಮ ಕೆಲಸ ಎಂದರೆ ಚೌಕಟ್ಟುಗಳನ್ನು ಮೀರಿ ವಿಭಿನ್ನವಾದದ್ದನ್ನು ಸೃಷ್ಟಿಸುವುದು" ಎಂದು ನಟಿ ಹೇಳಿದ್ದಾರೆ.

"...ನಮ್ಮ ದೇಶ ಈ ರೀತಿಯ ವಿಷಯಗಳಿಗೆ ಈಗ ಸಿದ್ಧವಿದೆ.. ಇದು ವಯಸ್ಕರ ಹಾಸ್ಯ ಚಿತ್ರವಾದರೂ ಕಥೆ ಬಹಳ ಚೆನ್ನಾಗಿದೆ" ಎಂದಿದ್ದಾರೆ.

ಮಿಲಪ್ ಜವೇರಿ ನಿರ್ದೇಶನದ ಈ ಚಿತ್ರದಲ್ಲಿ ತುಷಾರ್ ಕಪೂರ್ ಮತ್ತು ವೀರ್ ದಾಸ್ ಕೂಡ ನಟಿಸಿದ್ದಾರೆ.

SCROLL FOR NEXT