ಎಂಎಸ್‌ಜಿ - ದ ಮೆಸೆಂಜರ್ ಪೋಸ್ಟರ್ 
ಬಾಲಿವುಡ್

ಎಂಎಸ್‌ಜಿ ಸಿನಿಮಾ ತೆರೆಗೆ; ಹರ್ಯಾಣ, ಚಂಢೀಗಢದಲ್ಲಿ ಬಿಗಿ ಭದ್ರತೆ

ಎಂಎಸ್‌ಜಿ - ದ ಮೆಸೆಂಜರ್ ಸಿನಿಮಾ ಇವತ್ತು ದೇಶಾದ್ಯಂತ ತೆರೆ ಕಂಡಿದೆ. ಪ್ರಸ್ತುತ ಸಿನಿಮಾಗೆ ಸಂಬಂಧಿಸಿದಂತೆ ...

ಚಂಡೀಗಢ:  ಎಂಎಸ್‌ಜಿ - ದ ಮೆಸೆಂಜರ್ ಸಿನಿಮಾ ಇವತ್ತು ದೇಶಾದ್ಯಂತ ತೆರೆ ಕಂಡಿದೆ. ಪ್ರಸ್ತುತ ಸಿನಿಮಾಗೆ ಸಂಬಂಧಿಸಿದಂತೆ ವಿವಾದಗಳು ಹುಟ್ಟಿಕೊಂಡಿರುವುದರಿಂದ ಹರ್ಯಾಣ ಮತ್ತು ಚಂಡೀಗಢದಲ್ಲಿ ನಿನ್ನೆಯಿಂದಲೇ ಬಿಗಿ ಭದ್ರತೆಯನ್ನೇರ್ಪಡಿಸಿದೆ.

ದೇರಾ ಸಾಚಾ ಸೌದಾ ಮುಖ್ಯಸ್ಥ ಗುರ್‌ಮೀತ್ ರಾಮ್ ರಹೀಂ ಸಿಂಗ್ ಅವರ ಈ ಸಿನಿಮಾ ಬಿಡುಗಡೆಗೆ  ಸಿಖ್ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು. ಸಿಖ್ ಸಮುದಾಯದಿಂದ ಪ್ರತಿಭಟನೆ ಕಂಡು ಬಂದ ಕಾರಣ ಹರ್ಯಾಣ ಮತ್ತು ಚಂಡೀಗಢದಲ್ಲಿ ಬಿಗಿ ಭದ್ರತೆಯನ್ನೊದಗಿಸಲಾಗಿದೆ.

ಈ ಎರಡೂ ರಾಜ್ಯಗಳಲ್ಲಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಪಂಜಾಬ್‌ನಲ್ಲಿ ಕಳೆದ ತಿಂಗಳು ಈ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿತ್ತು.

ಕಳೆದ ವಾರವಷ್ಟೇ ಸೆನ್ಸಾರ್ ಮಂಡಳಿ ಸಿನಿಮಾ ತೆರೆ ಕಾಣುವುದಕ್ಕೆ ಸಮ್ಮತಿ ನೀಡಿತ್ತು.  ಶುಕ್ರವಾರ ದೇಶಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಪ್ರಸ್ತುತ ಚಿತ್ರ ಪ್ರದರ್ಶನ ಕಾಣುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!