ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಅವರ ಇತ್ತೀಚಿನ ಐಟಮ್ ಸಾಂಗ್ ಪಡ್ಡೆಗಳ ಮನ ಗೆದ್ದಿದೆ. 'ಬ್ರದರ್ಸ್' ಸಿನೆಮಾದ 'ಮೇರ ನಾಮ್ ಮೇರಿ' ಹಾಡಿನ ವಿಡಿಯೋ ಯೂಟ್ಯೂಬ್ ತಾಣದಲ್ಲಿ ೧೦ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳ ಸಾಧನೆ ಮಾಡಿದೆ.
ಈ ಹಾಡಿನ ಯಶಸ್ಸಿನ ಬಗ್ಗೆ ಟ್ವಿಟ್ ಮಾಡಿರುವ ಸಿನಿಮಾದ ನಾಯಕ ನಟ ಸಿದ್ಧಾರ್ಥ್ ಮಲಹೋತ್ರ "#ಮೇರಾನಾಂಮೇರಿ ೧೦ ಲಕ್ಷ ವೀಕ್ಷಣೆ, ಈ ಪ್ರೀತಿಯನ್ನು ನೊಡಲು ಸಂತಸವಾಗುತ್ತಿದೆ ಮುಂದುವರೆಯಲಿ @ಬ್ರದರ್ಸ್೨೦೧೫ @ಕರಣ್ ಮಲ್ಹೋತ್ರ೨೧ #ಕರೀನಾಕಪೂರ್" ಎಂದು ಬರೆದಿದ್ದಾರೆ.
ಈ ಮಧ್ಯ ಟ್ವೀಟ್ ಮಾಡಿರುವ ನಿರ್ದೇಶಕ ಕರಣ್ ಜೋಹರ್ "#ಮೇರಾನಾಂಮೇರಿ ನೃತ್ಯ ಬೆಂಕಿ ಹಚ್ಚಿದೆ. @ಬ್ರದರ್ಸ್೨೦೧೫ @ಎಸ್೧ಧಾರ್ಥ್ ಎಂ @ಕರಣ್ ಮಲ್ಹೋತ್ರ೨೧ @ಸೋನಿಮ್ಯೂಸಿಕ್ ಇಂಡಿಯ" ಎಂದಿದ್ದಾರೆ.