ಸಲ್ಮಾ ನ್ ಖಾನ್ 
ಬಾಲಿವುಡ್

ನನ್ನ ಕುಟುಂಬದಲ್ಲಿ ಮದುವೆಗೆ ಯಾರೂ ಬಲವಂತ ಮಾಡುತ್ತಿಲ್ಲ: ಸಲ್ಮಾನ್ ಖಾನ್

ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಎಲ್ಲಿ ಹೋದರೂ ಆತನ ಮದುವೆ ಬಗ್ಗೆ ಜನ ಮಾತನಾಡುತ್ತಾರೆ...

ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಎಲ್ಲಿ ಹೋದರೂ ಆತನ ಮದುವೆ ಬಗ್ಗೆ ಜನ ಮಾತನಾಡುತ್ತಾರೆ. ಸಲ್ಮಾನ್ ಖಾನ್ ಯಾವಾಗ ಮದುವೆಯಾಗುವುದು ಅಂತ ಆತನ ಅಭಿಮಾನಿಗಳು ಲೆಕ್ಕ ಹಾಕಲು ಶುರುವಾಗಿ ಎಷ್ಟೋ ವರ್ಷಗಳಾಗಿವೆ. ಇದೀಗ ಸ್ವತಹ ಸಲ್ಮಾನ್ ಖಾನೇ ತನ್ನ ಮದುವೆ ಕುರಿತು ಮಾತನಾಡಿದ್ದಾನೆ.

''ನನಗೆ ಮದುವೆ ಆಗುವ ಯಾವುದೇ ತರಾತುರಿ ಇಲ್ಲ, ನನ್ನ ಮನೆಯಲ್ಲಿ ಸಹ ಯಾರು ನನ್ನನ್ನು ಮದುವೆ ಮಾಡಿಕೊಳ್ಳು ಎಂದು ಒತ್ತಾಯ ಮಾಡುತ್ತಿಲ್ಲ ಎಂದು 49 ವರ್ಷದ ಸಲ್ಮಾನ್ ಇತ್ತೀಚೆಗೆ  92.7 ಬಿಗ್ ಎಫ್ ಎಂ ಚಾನೆಲ್ ಶೋ ವೇಳೆ ಹೇಳಿಕೊಂಡಿದ್ದಾನೆ.

ಜೀವನದ ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನನ್ನ ಮನೆಯವರು ನನಗೆ ಬಿಟ್ಟುಬಿಟ್ಟಿದ್ದಾರೆ. ಮದುವೆಯಾಗುವುದು, ಬಿಡುವುದು ನನಗೆ ಬಿಟ್ಟ ವಿಚಾರ ಎಂದು 'ದಬಂಗ್' ನಟ ತಿಳಿಸಿದ್ದಾನೆ.

ಇದೇ ಸಂದರ್ಭದಲ್ಲಿ, ತನ್ನ ಮದುವೆ ಬಗ್ಗೆ ಒಂದೊಂದು ಸಲ ಒಂದೊಂದು ಯೋಚನೆ ಬರುತ್ತಂತೆ. ನಿನ್ನೆ ಓಕೆ, ಹಿರಿಯರು ನೋಡಿದ ಹುಡುಗಿಯನ್ನು ಮದುವೆ ಮಾಡಿಕೊಳ್ಳೋಣ ಅಂತ ಅನ್ನಿಸಿದ್ದರೆ ಇಂದು ಮದುವೆ ಬೇಡ ಸುಮ್ನಿದ್ದುಬಿಡೋಣ ಅಂತ ಅನ್ಸತ್ತೆ, ನಾಳೆ ಇನ್ನೊಂದು ಯೋಚನೆ ಬರುತ್ತೆ ಅಂತ ಸಲ್ಮಾನ್ ಹೇಳಿದ್ದಾನೆ.

ಇನ್ನು ಯಾವುದೋ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ತಂದೆ ಸಲೀಂ ಖಾನ್ ನನ್ನು ಸಲ್ಮಾನ್ ಮದುವೆ ಯಾವಾಗ ಅಂತ ಮೀಡಿಯಾದವ್ರು ಕೇಳಿದ್ರಂತೆ. ಅದಕ್ಕೆ ಅವರು ನಕ್ಕು' ಈ ಪ್ರಶ್ನೆಗೆ ಅಲ್ಲಾ ದೇವರಿಗೂ ಉತ್ತರ ಕೊಡೋಕೆ ಸಾಧ್ಯವಿಲ್ಲ' ಅಂದ್ರಂತೆ.

ಬಾಲಿವುಡ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಲ್ಮಾನ್ ಗೆ  ಹುಡುಗಿಯರ ಸಂಬಂಧದ ಬಗ್ಗೆ ಈಗಲೂ ಭಾರೀ ಕುತೂಹಲವಿದೆ. ಅದು ಸಂಗೀತ ಬಿಜಲಾನಿ, ಐಶ್ವರ್ಯ ರೈಯಿಂದ ಹಿಡಿದು ಕತ್ರಿನಾ ಕೈಫ್ ವರೆಗೆ ಕುತೂಹಲದ ಚರ್ಚೆಯ ವಿಷಯ.

ಇನ್ನು ಕೆರಿಯರ್ ನಲ್ಲಿಯೂ ಅಷ್ಟೇ ಆಸಕ್ತಿ ಉಳಿಸಿಕೊಂಡಿರುವ ಸಲ್ಮಾನ್ ಭಾಯಿಯ ಹೊಸ ಚಿತ್ರ 'ಭಜರಂಗಿ ಭಾಯಿಜಾನ್' ನಾಳೆ(ಶುಕ್ರವಾರ) ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಕಬೀರ್ ಖಾನ್ ನಿರ್ದೇಶನದಲ್ಲಿ, ಕರೀನಾ ಕಪೂರ್,ನವಜುದ್ದೀನ್ ಸಿದ್ದಿಕಿ ಅವರು ನಟಿಸಿರುವ ಚಿತ್ರ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!