ಶಾಹಿದ್ ಕಪೂರ್- ಕರೀನಾ ಕಪೂರ್(ಸಾಂದರ್ಭಿಕ ಚಿತ್ರ) 
ಬಾಲಿವುಡ್

ವಿವಾಹ ದಿನದಂದು ಶಾಹಿದ್ ಮೊಗದಲ್ಲಿ ಸಂತಸ ಕಂಡೆ: ಕರೀನಾ ಕಪೂರ್

ವಿವಾದ ಸಂದರ್ಭದಲ್ಲಿ ತನ್ನ ಮಾಜಿ ಗೆಳೆಯ ಶಾಹಿದ್ ಕಪೂರ್ ಮೊಗದಲ್ಲಿ ಸಂತಸ ಕಂಡಿರುವುದಾಗಿ ಹೇಳಿದ್ದಾರೆ.

ಬಾಲಿವುಡ್ ನಟ ಶಾಹಿದ್ ಕಪೂರ್ ವಿವಾಹದ ಬಗ್ಗೆ ಕರೀನಾ ಕಪೂರ್ ಪ್ರತಿಕ್ರಿಯಿಸಿದ್ದು, ವಿವಾದ ಸಂದರ್ಭದಲ್ಲಿ ತನ್ನ ಮಾಜಿ ಗೆಳೆಯ ಶಾಹಿದ್ ಕಪೂರ್ ಮೊಗದಲ್ಲಿ ಸಂತಸ ಕಂಡಿರುವುದಾಗಿ ಹೇಳಿದ್ದಾರೆ.

ಶಾಹಿದ್ ಕಪೂರ್ ವಿವಾಹ ಸಮಾರಂಭದಲ್ಲಿ ಕರೀನಾ ಕಪೂರ್ ಭಾಗಿಯಾಗಿರಲಿಲ್ಲವಾದರೂ, ತಾನು ಶಾಹಿದ್ ಕಪೂರ್ ಸಂತಸದಿಂದಿರುವುದನ್ನು ಕಂಡೆ, ಉತ್ತಮ ಸಾಧನೆ ಮಾಡಿರುವ ಶಾಹಿದ್ ಕಪೂರ್, ತನ್ನ ವೃತ್ತಿಜೀವನದ ಬಗ್ಗೆ  ತೃಪ್ತಿ ಹೊಂದಿದ್ದಾರೆ, ವಿವಾಹವಾಗಲು ಇದು ಆತನಿಗೆ ಸೂಕ್ತ ಸಮಯವಾಗಿತ್ತು ಎಂದು ಕರೀನಾ ಕಪೂರ್ ಹೇಳಿದ್ದಾರೆ.

ಅದ್ಭುತ ವ್ಯಕ್ತಿತ್ವ ಹೊಂದಿರುವ ಶಾಹಿದ್ ಕಪೂರ್, ಒಳ್ಳೆಯ ಪತಿಯಾಗಿರಲಿದ್ದಾರೆ ಎಂದಿದ್ದಾರೆ ಕರೀನಾ. ಶಾಹಿದ್ ಕಪೂರ್ ವಿವಾಹವಾಗುವುದರ ಬಗ್ಗೆ ತನಗೆ ತಿಳಿದಿತ್ತು, ತಾನು ಮದುವೆಯಾಗುತ್ತಿರುವುದಾಗಿ ಶಾಹಿದ್ ಕಪೂರ್ ತಿಳಿಸಿದ್ದರು. ಇದರಿಂದ ನನಗೂ ಸಂತಸವಾಯಿತು ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಶಾಹಿದ್ ಕಪೂರ್ ವಿವಾಹದಲ್ಲಿ ಪಾಲ್ಗೊಳ್ಳುವ ವಿಷಯವಾಗಿ ಪ್ರತಿಕ್ರಿಯಿಸಿದ್ದ, ಆಹ್ವಾನ ಬಂದರೆ ಹೋಗುವುದಾಗಿ ಹೇಳಿದ್ದರು. ಅದರಂತೆಯೇ ಇತ್ತೀಚೆಗೆ ನಡೆದ ಶಾಹಿದ್ ಕಪೂರ್ ವಿವಾಹ ಸಮಾರಂಭದಲ್ಲಿ ಕರೀನಾ ಕಪೂರ್ ಭಾಗವಹಿಸುವ ನಿರೀಕ್ಷೆ ಇತ್ತು. ಇದಕ್ಕೂ ಮುನ್ನ ಶಾಹಿದ್ ಕಪೂರ್ ಕರೀನಾ ಕಪೂರ್ ಪ್ರೇಮಾಂಕುರವಾಗಿ ವಿವಾಹವಾಗುತ್ತಾರೆ ಎಂಬ ವದಂತಿ ಇತ್ತು, ಆದರೆ 2007 ರಲ್ಲಿ ಇಬ್ಬರ ನಡುವಿನ ಸ್ನೇಹ ಹದಗೆಟ್ಟು ಬೇರೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ