ಬಾಲಿವುಡ್

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾ ಬಾಲನ್?

Lingaraj Badiger

ಇಂದಿರಾ ಗಾಂಧಿ ಅವರ ಜೀವನ ಆಧಾರಿತ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಮಾಜಿ ಪ್ರಧಾನಿಯ ಪಾತ್ರದಲ್ಲಿ ಅಭಿನಯಿಸಲು ಆಸಕ್ತಿ ತೋರಿದ್ದಾರೆ. ಚಿತ್ರಕಥೆಯನ್ನು ವಿದ್ಯಾಬಾಲನ್ ಅವರು ಇಷ್ಟಪಟ್ಟಿದ್ದಾರೆ. ಆದರೆ ಇನ್ನೂ ಸಂಪೂರ್ಣ ಒಪ್ಪಿಗೆ ನೀಡಿಲ್ಲ ಎಂದು ಚಿತ್ರದ ನಿರ್ದೇಶಕ ಮನಿಶ್ ಗುಪ್ತಾ ಹೇಳಿದ್ದಾರೆ.

'ರಹಸ್ಯ' ಚಿತ್ರದ ನಿರ್ದೇಶಕರು ಗಾಂಧಿ ಕುಟುಂಬದ ಅನುಮತಿಗಾಗಿ ಕಾಯುತ್ತಿದ್ದು, ನನ್ನ ಚಿತ್ರ ಇಂದಿರಾ ಗಾಂಧಿಯವರು ಹುಟ್ಟಿದಾಗಿನಿಂದ ಹತ್ಯೆಯಾಗುವವರೆಗಿನ ಕಥೆಯನ್ನು ಒಳಗೊಂಡಿರುತ್ತದೆ. ಇಂಧಿರಾ ಗಾಂಧಿಯವರ ಬಾಲ್ಯ, ಯೌವ್ವನ ಹಾಗೂ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಮತ್ತು ಹತ್ಯೆಯ ಕುರಿತು ಚಿತ್ರ ವಿವರಿಸಲಿದೆ ಎಂದು ಗುಪ್ತಾ ತಿಳಿಸಿದ್ದಾರೆ.

ಈ ಸಂಬಂಧ ಗುಪ್ತಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ಆದರೆ ಇದು ಸೂಕ್ಷ್ಮ ವಿಚಾರವಾಗಿದ್ದರಿಂದ ಸೋನಿಯಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮುಂದಾಗಿದ್ದಾರೆ.

ಕಳೆದ 8 ತಿಂಗಳಿಂದ ನಾನು ಸೋನಿಯಾ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಇಂದಿರಾ ಗಾಂಧಿ ಅವರ ಕುರಿತು ನಾವು ಚಿತ್ರ ಮಾಡುತ್ತಿರುವುದು ಈಗಾಗಲೇ ಅವರ ಗಮನಕ್ಕೆ ತಂದಿದ್ದೇವೆ. ಆದರೂ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಚಿತ್ರಕ್ಕೆ ಅಧಿಕೃತ ಒಪ್ಪಿಗೆ ಪಡೆಯಬೇಕು ಎಂದು ಗುಪ್ತಾ ಹೇಳಿದ್ದಾರೆ.

SCROLL FOR NEXT