ನಟಿ ದೀಪಿಕಾ ಪಡುಕೋಣೆ 
ಬಾಲಿವುಡ್

ಹಾಲಿವುಡ್ ಗೆ ಸಿದ್ಧ ಎಂದ ದೀಪಿಕಾ

ಕರಣ್ ಜೋಹರ್ ಅವರ 'ದಿಲ್ ಹೈ ಮುಶ್ಕಿಲ್ ಇನ್ ಲಂಡನ್' ಚಿತ್ರದಲ್ಲಿ ರಣಬೀರ್ ಕಪೂರ್ ಬ್ಯುಸಿಯಾಗಿದ್ದರೆ, ನಟಿ ದೀಪಿಕಾ ಪಡುಕೋಣೆ, ರಣಬೀರ್ ಜೊತೆ ನಟಿಸಿರುವ 'ತಮಾಶಾ'

ಕರಣ್ ಜೋಹರ್ ಅವರ 'ದಿಲ್ ಹೈ ಮುಶ್ಕಿಲ್ ಇನ್ ಲಂಡನ್' ಚಿತ್ರದಲ್ಲಿ ರಣಬೀರ್ ಕಪೂರ್ ಬ್ಯುಸಿಯಾಗಿದ್ದರೆ, ನಟಿ ದೀಪಿಕಾ ಪಡುಕೋಣೆ, ರಣಬೀರ್ ಜೊತೆ ನಟಿಸಿರುವ 'ತಮಾಶಾ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಏಕ ತಾರೆಯಾಗಿ ಕಾಣಿಸಿಕೊಂಡಿದ್ದಾರೆ.

ಸಿನೆಮಾಗೆ ಸಂಗೀತ ನಿರ್ದೇಶಿಸಿರುವ ಎ ಆರ್ ರೆಹಮಾನ್ ಅವರನ್ನು ಮನಸಾರೆ ಹೊಗಳಿದ ದೀಪಿಕಾ "ವಿಶ್ವದ ಇತರ ಸಿನೆಮಾಗಳಿಗಿಂತ ನಮ್ಮ ಸಿನೆಮಾಗಳನ್ನು ವಿಶಿಷ್ಟವಾಗಿಸುವುದು ಸಂಗೀತ. ನಮ್ಮ ವೃತ್ತಿಜೀವನದಲ್ಲಿ ಸಿನೆಮಾವೊಂದಕ್ಕೆ ರೆಹಮಾನ್ ಸಂಗೀತ ನಿರ್ದೇಶಿಸಿದರೆ ಅದು ಮೈಲಿಗಲ್ಲು. ತಮಾಶಾ ಹಾಡುಗಳನ್ನು ಚಿತ್ರೀಕರಿಸುವಾಗ ಒಳ್ಳೆಯ ಸಮಯ ಕಳೆದೆವು" ಎಂದು ನಟಿ ತಿಳಿಸಿದ್ದಾರೆ.

ಸಿನೆಮಾದಲ್ಲಿ ತಮ್ಮ ನೆಚ್ಚಿನ ಹಾಡನ್ನು ಸೂಚಿಸುವಂತೆ ಕೇಳಿದಾಗ, ಅಲ್ಕಾ ಯಾಗ್ನಿಕ್ ಮತ್ತು ಅರ್ಜಿತ್ ಸಿಂಗ್ ಹಾಡಿರುವ 'ಅಗರ್ ತುಮ್ ಸಾಥ್ ಹೋ' ಇಷ್ಟ ಎಂದಿರುವ ದೀಪಿಕಾ "ಪ್ರೀತಿಯನ್ನು ಅನುಭವಿಸಿರುವ ಜನರನ್ನು ಈ ಹಾಡು ನೆನಪಿಸುತ್ತದೆ" ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸಿನೆಮಾದಲ್ಲಿ ನಟಿಸುವಾಸೆ ತೋರಿರುವ ನಟಿ "ಹಾಲಿವುಡ್ ಸಿನೆಮಾಗಳಲ್ಲಿ ನಟಿಸುವ ಆಸೆಯಿದೆ" ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!