ಬ್ರೆಟ್‍ಲೀ-ತಾನ್ನಿಷ್ತಾ ಚಟರ್ಜಿ (ಸಂಗ್ರಹ ಚಿತ್ರ) 
ಬಾಲಿವುಡ್

ಬ್ರೆಟ್‍ಲೀ ಸಂಗಾತಿ ಬಂಗಾಳಿ ತಾನ್ನಿಷ್ತಾ

ತಾನ್ನಿಷ್ತಾ ಚಟರ್ಜಿ ಬಂಗಾಳಿ ಕೃಷ್ಣ ಸುಂದರಿ. ಯುರೋಪಿನ ಹಲವು ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿ ಹತ್ತಾರು ಅವಾರ್ಡ್ ಪಡೆದರೂ ಇಲ್ಲಿ ನಮಗಿನ್ನೂ ಅಪರಿಚಿತೆ ಎನ್ನುವ ಮಟ್ಟಿಗೆ ಗುಪ್ತಗಾಮಿನಿ...

ತಾನ್ನಿಷ್ತಾ ಚಟರ್ಜಿ ಬಂಗಾಳಿ ಕೃಷ್ಣ ಸುಂದರಿ. ಯುರೋಪಿನ ಹಲವು ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿ ಹತ್ತಾರು ಅವಾರ್ಡ್ ಪಡೆದರೂ ಇಲ್ಲಿ ನಮಗಿನ್ನೂ ಅಪರಿಚಿತೆ ಎನ್ನುವ ಮಟ್ಟಿಗೆ ಗುಪ್ತಗಾಮಿನಿ.  ಈಗ `ಅನ್‍ಇಂಡಿಯನ್' ಸಿನಿಮಾದಲ್ಲಿ ಆಸೀಸ್‍ನ ಮಾಜಿ ಕ್ರಿಕೆಟಿಗ ಬ್ರೆಟ್‍ಲೀ ಜೊತೆ ನಟಿಸಿ, ಗ್ರ್ಯಾಂಡ್ ಆಗಿ ಸುದ್ದಿ ಆಗ್ತಿದ್ದಾಳೆ!

ಅನುಪಮ ಶರ್ಮಾ ನಿರ್ದೇಶನದ `ಅನ್‍ಇಂಡಿಯನ್' ನಾಡಿದ್ದು (ಅ.15) ತೆರೆಕಾಣಲಿದೆ. ಭಾರತದ ಅಂಧ, ಅನಾಥ ಮಕ್ಕಳ ಕಲ್ಯಾಣದ ಕನಸು ಕಾಣುತ್ತಲೇ ಸಿನಿಮಾ ಮೂಲಕವೂ  ಇಂಡಿಯಾವನ್ನು ಜಪಿಸುತ್ತಿದ್ದಾರೆ ಬ್ರೆಟ್‍ಲೀ. ತಾನ್ನಿಷ್ತಾ ಇಲ್ಲಿ ಸಿಂಗಲ್ ಮದರ್ ಅಂತೆ. ಇವಳಿಗೊಬ್ಬಳು ಮಗಳು. ಬ್ಯಾಚುಲರ್ ಹುಡುಗ ಬ್ರೆಟ್ ಲೀ ಜೊತೆಗೆ ಈಕೆಗೆ ನಂಟಾಗುತ್ತದೆ. ಬ್ರೆಟ್‍ಲೀ  ಪಾತ್ರವೂ ಇಲ್ಲಿ ಮಜವಾಗಿದೆಯಂತೆ. ವಿಲ್ ಎಂಬ ಹೆಸರಿನ ಇಂಗ್ಲಿಷ್ ಟೀಚರ್ ಬ್ರೆಟ್‍ಲೀ. ವಿದೇಶಿ ಹುಡುಗರಿಗೆ `ಆಸೀಸ್ ಇಂಗ್ಲಿಷ್' ಕಲಿಸುತ್ತಾನೆ. ಇವನೊಂದು ಹೇಳಿದ್ರೆ, ಹುಡುಗರು ಇನ್ನೊಂದು  ರೀತಿ ಉಚ್ಚರಿಸುವ ದೃಶ್ಯಗಳು ಹಾಸ್ಯಭರಿತವಾಗಿವೆಯಂತೆ. ಬ್ರೆಟ್‍ಲೀ ಬಿಳಿ ಕೋಟ್ ಹಾಕ್ಕೊಂಡು ಬರುತ್ತಿದ್ದಾಗ ಆತನ ಮೇಲೆ ಬಣ್ಣದ ಓಕುಳಿ ಎರಚಿ ಅವನನ್ನು ಕುಣಿಯುವಂತೆ  ಹುರಿದುಂಬಿಸುತ್ತಾಳೆ.

ಬ್ರೆಟ್‍ಲೀ ಕ್ರಿಕೆಟ್ ಮೈದಾನದಲ್ಲಿದ್ದಾಗ ಗಾರ್ಡ್ ಹಾಕ್ಕೊಳ್ತಿರ್ತಾನೆ, ಆ ದೃಶ್ಯವನ್ನು ನೋಡಿ ತಾನ್ನಿಷ್ತಾ ಗೊಳ್ಳನೆ ನಗುತ್ತಾಳೆ. ತಾನ್ನಿಷ್ತಾ ಯೋಗ ಮಾಡ್ತಿರೋದನ್ನು ಬ್ರೆಟ್‍ಲೀ ನೋಡಿ ಹುಬ್ಬೇರಿಸುವ  ದೃಶ್ಯಗಳು ಟ್ರೈಲರ್‍ನಲ್ಲಿವೆ. ದೆಹಲಿ ಯುನಿವರ್ಸಿಟಿಯಲ್ಲಿ ಕೆಮಿಸ್ಟ್ರಿ ಓದಿರುವ ತಾನ್ನಿಷ್ತಾ ಹುಟ್ಟಿದ್ದು ಮುಂಬೈನಲ್ಲಿ. ಯುರೋಪಿನ ಘಟಾನುಘಟಿ ಕಲಾವಿದರೊಟ್ಟಿಗೆ ನಾಟಕಗಳಲ್ಲಿ ಅಭಿನಯಿಸಿದ್ದಾಳೆ.  ಜರ್ಮನ್ ಫಿಲ್ಮ್ ಗಳಲ್ಲೂ ನಟಿಸಿದ್ದಾಳೆ. ಒಟ್ಟಾರೆ ಏಳೆಂದು ಪ್ರಶಸ್ತಿಗಳನ್ನು ಪಡೆದಿರುವ ತಾನ್ನಿಷ್ತಾ, ಬಾಲಿವುಡ್‍ನ `ಗುಲಾಬ್‍ಗ್ಯಾಂಗ್'ನಲ್ಲೂ ಮಾಧುರಿ ದಿಕ್ಷಿತ್ ಜೊತೆ ನಟಿಸಿದ್ದಾಳೆ. ಆದರೂ ನಾವು  ತಾನ್ನಿಷ್ತಾ ಯಾರೆಂದು ಕೇಳುವ ಸ್ಥಿತಿಯಲ್ಲಿದ್ದೇವೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT