ರೇಖಾ 
ಬಾಲಿವುಡ್

ರೇಖಾ ಬರ್ತ್‌ಡೇಗೆ ಮಸ್ತಾನಿ ಗಿಫ್ಟ್

ಇನ್ ಆಂಖೋ ಕೆ ಮಸ್ತಿ, ಮಸ್ತಾನೆ ಹಜಾರೋ.. ಈ ಹಾಡು ಕೇಳದವರುಂಟೆ! ಸೌಂದರ್ಯಕ್ಕೆ ಇನ್ನೊಂದು ಹೆಸರೇನೊ ಎಂಬಂತಿದ್ದ ರೇಖಾ...

ಇನ್ ಆಂಖೋ ಕೆ ಮಸ್ತಿ, ಮಸ್ತಾನೆ ಹಜಾರೋ.. ಈ ಹಾಡು ಕೇಳದವರುಂಟೆ! ಸೌಂದರ್ಯಕ್ಕೆ ಇನ್ನೊಂದು ಹೆಸರೇನೊ ಎಂಬಂತಿದ್ದ ರೇಖಾ ನಟಿಸಿದ ಈ ಗೀತೆ ಸಾರ್ವಕಾಲಿಕ ಜನಪ್ರಿಯ ಹಿಂದಿ ಗೀತೆಗಳ ಸಾಲಿನಲ್ಲಿ ಸದಾ ಕಾಲ ಉಳಿಯುವ ಗೀತೆ. 
ರೇಖಾ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸೌಂದರ್ಯವನ್ನು, ನೆನಪುಗಳನ್ನು ಮತ್ತೆ ಜೀವಂತಗೊಳಿಸುವಂಥ ಕೆಲಸವೊಂದನ್ನು ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಮಾಡಲಾಯಿತು. ಸೌಜನ್ಯ ಮದಭೂಷಿ ಎಂಬ ಗಾಯಕಿಯ ಮೂಲಕ ಇನ್ ಆಂಖೋಕೆ ಮಸ್ತಿ ಗೀತೆಯನ್ನು ಹಾಡಿಸಿ ಅದನ್ನು ವಿಡಿಯೋ ರೂಪದಲ್ಲಿ ಹೊರತರಲಾಯಿತು. ಇದನ್ನು ಮಾಡಿದ್ದು ಯೂಟ್ಯೂಬ್ ಪ್ರಸಿದ್ಧ ಚಾನೆಲ್ ಬೀಯಿಂಗ್ ಇಂಡಿಯನ್ ಮ್ಯೂಸಿಕ್. 
ರೇಖಾ ಅವರನ್ನು ಹೋಲುವ ನಟಿಯನ್ನು ವಿಡಿಯೋದಲ್ಲಿ ಬಳಸಲಾಗಿದ್ದು, ರೇಖಾ ಅವರ ಸೌಂದರ್ಯ, ಒನಪು, ವೈಯಾರಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದುಕೊಡುವ ಪ್ರಯತ್ನ ಮಾಡಲಾಗಿದೆ. ಎಪ್ಪತ್ತರ ದಶಕದಲ್ಲಿ ಅಸಂಖ್ಯ ಹೃದಯಗಳ ನಿದ್ರೆಗೆಡಿಸಿದ ರೇಖಾ ನೆನಪನ್ನು ಬಿsನ್ನವಾಗಿ ಕಟ್ಟಿಕೊಡುತ್ತದೆ ಈ ವಿಡಿಯೋ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ