ಅಮಿತಾಬ್ ಬಚ್ಚನ್ 
ಬಾಲಿವುಡ್

ಅನಗತ್ಯ ವಿವಾದಗಳಿಂದ ನಾನು ದೂರವಿರಲು ಬಯಸುತ್ತೇನೆ: ಬಿಗ್ ಬಿ

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕುವ ಘಟನೆಗಳು ವರದಿಯಾಗುತ್ತಿರುವ ಈಹೊತ್ತಲ್ಲಿ ತಾನು ಈ ರೀತಿಯ ಪರಿಸ್ಥಿತಿಗೆ ಸಿಲುಕಿ...

ನವದೆಹಲಿ: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕುವ ಘಟನೆಗಳು ವರದಿಯಾಗುತ್ತಿರುವ ಈಹೊತ್ತಲ್ಲಿ ತಾನು ಈ ರೀತಿಯ ಪರಿಸ್ಥಿತಿಗೆ ಸಿಲುಕಿಕೊಳ್ಳದಂತೆ ಹೆಚ್ಚಿನ ಜಾಗರೂಕತೆ ವಹಿಸುತ್ತೇನೆ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಬಿಗ್ ಬಿ, ನಾನು ಏನಾದರೂ ಹೇಳುವ ಮುನ್ನ ಅತೀವ ಜಾಗ್ರತೆ ವಹಿಸುತ್ತಿದ್ದು, ಅನಗತ್ಯ ವಿವಾದಗಳಿಗೆ ಸಿಲುಕದಂತೆ ಎಚ್ಚರವಹಿಸುತ್ತೇನೆ ಎಂದಿದ್ದಾರೆ.
ಫೇಸ್‌ಬುಕ್ ನಲ್ಲಿ ಸುಮಾರು 20 ಮಿಲಿಯನ್ ಗಿಂತಲೂ ಹೆಚ್ಚು, ಟ್ವಿಟರ್ ನಲ್ಲಿ 17.5 ಮಿಲಿಯನ್ ಅಭಿಮಾನಿ ಬಳಗವನ್ನು ಹೊಂದಿರುವ ಬಿಗ್ ಬಿ ಬ್ಲಾಗ್‌ಗಳನ್ನೂ ಸಕ್ರಿಯರಾಗಿದ್ದಾರೆ.  73ರ ಹರೆಯದ ಬಿಗ್ ಬಿಯನ್ನು ಸೋಷ್ಯಲ್ ಮೀಡಿಯಾ ಪರ್ಸನ್ ಆಫ್ ದ ಇಯರ್ ಎಂಬ ಪ್ರಶಸ್ತಿಯನ್ನು ನೀಡಿಯೂ ಗೌರವಿಸಲಾಗಿತ್ತು.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಗ್ ಬಿ, ನಮ್ಮಂತ ಸೆಲೆಬ್ರಿಟಿಗಳು ಬೇಗನೆ ವಿವಾದಕ್ಕೆಡೆಯಾಗುತ್ತಾರೆ. ನಾವು ಏನು ಹೇಳಿದರೂ ವಿವಾದವಾಗುತ್ತಿದೆ ಎಂಬ ಅರಿವು ನಮಗಿರುವಾಗ ಮಾತುಗಳನ್ನಾಡುವ ಮುನ್ನ ಎಚ್ಚರವಹಿಸಲೇ ಬೇಕಾಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!