ಕಂಗನಾ ರೌನತ್ 
ಬಾಲಿವುಡ್

ಕಂಗನಾ ಕಿಡಿಕಾರಿದ್ದು ಯಾರ ಮೇಲೆ?

ಬಾಲಿವುಡ್‍ನ `ಕ್ವೀನ್' ಕೆಂಡವಾಗಿದ್ದಾಳೆ. ನಂ.1 ನಟಿ ಕಂಗನಾ ರಾಣೌತ್ ಕಂಡರೆ ಕೆಲವು ನಟಿಯರು ಮೂತಿಮುರಿಯಲು ಇದೂ ಕಾರಣ; ಆಕೆ ಸುಳ್ಳು...

ಬಾಲಿವುಡ್‍ನ `ಕ್ವೀನ್' ಕೆಂಡವಾಗಿದ್ದಾಳೆ.ನಂ.1 ನಟಿ ಕಂಗನಾ ರಾಣೌತ್ ಕಂಡರೆ ಕೆಲವು ನಟಿಯರು ಮೂತಿ ಮುರಿಯಲು ಇದೂ ಕಾರಣ;ಆಕೆ ಸುಳ್ಳು ಜಾಹೀರಾತುಗಳನ್ನು ದ್ವೇಷಿಸುವುದು! ಜಾಹೀರಾತಿನಲ್ಲಿ ಮಾದಕವಾಗಿ ಸುಳ್ಳು ಸ್ಟೇಟ್ ಮೆಂಟ್ ನೀಡಿ ದುಡ್ಡು ಮಾಡುವ ವೃತ್ತಿಗೆ ಕಂಗನಾ ಯಾವತ್ತೂ ಇಳಿದವಳಲ್ಲ.ಇತ್ತೀಚೆಗೆ ಫೇರ್‍ನೆಸ್ ಕ್ರೀಂ
ಕಂಪನಿಯೊಂದು ಕಂಗನಾಳ ಮನೆ ಬಾಗಿಲು ತಟ್ಟಿತ್ತು.`ನೀವು ನಂ.1 ನಟಿ ಆಗಿದ್ದೀರಿ.ನಮ್ಮ ಫೇರ್‍ನೆಸ್ ಬ್ರ್ಯಾಂಡಿಗೆ ನೀವೇ ರಾಯಭಾರಿ ಆಗಿ'.ಕಂಗನಾ ಒಪ್ಪಲೇ ಇಲ್ಲ.ಆ ಕಂಪನಿಯವರು 2 ಕೋಟಿ ರುಪಾಯಿಯ ಆಫರ್ ನೀಡಿದರು.`ನಾನು ದುಡ್ಡಿಗಾಗಿ ನಟಿಸಿ,ಸಮಾಜದ ಹಾದಿ ತಪ್ಪಿಸುವುದಿಲ್ಲ.ಸಾರಿ' ಎಂದು ಸ್ಟ್ರಿಕ್ಟ್ ಆಗಿ ಹೇಳಿ, ವಾಪಸು ಕಳುಹಿಸಿದಳು. ಇದಾಗಿ ಕೆಲವು ದಿನಗಳಾದವು. ಮತ್ತೆ ಆ ಕಂಪನಿಯವರು ಫೋನು ಮಾಡಿದ್ದಾರೆ.

ಕಂಗನಾ ಈಗ ಸಾರ್ವಜನಿಕವಾಗಿ ಆ ಕಂಪನಿ ಜಾಹೀರಾತುಗಳ ಬಣ್ಣ ಬಯಲು ಮಾಡಿದ್ದಾಳೆ. ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ಕಾಣಿಸುವ ಕೆಲವು ನಟಿಯರನ್ನು ಕಂಡರೆ ನನಗೆ ನಾಚಿಕೆ ಆಗುತ್ತೆ.ಮುಖದ ಕಾಂತಿ ಹೆಚ್ಚಿಸುತ್ತೇವೆ ಎನ್ನುವುದು ಕೇವಲ ಬೊಗಳೆ.ಇಂಥ  ಜಾಹೀರಾತುಗಳು ನೈಜ ಭಾರತೀಯ ಸೌಂದರ್ಯವನ್ನು ಅಪಮಾನ ಮಾಡುತ್ತಿವೆ.ಇವುಗಳಲ್ಲಿ ಜನಾಂಗೀಯ ನಿಂದನೆಯಿದೆ. ಇಂಥ ಜಾಹೀರಾತುಗಳಲ್ಲಿ ಪಾಲ್ಗೊಳ್ಳುವುದು  ಅಪರಾಧ ಕೃತ್ಯಗಳಿಗೆ ಸಮ' ಎಂದಿದ್ದಾಳೆ. ಬಾಲಿವುಡ್‍ನಲ್ಲಿ ಅನೇಕ ನಟಿಯರು ಸಿನಿಮಾಕ್ಕಿಂತ ಜಾಹೀರಾತುಗಳಲ್ಲೇ ಹೆಚ್ಚು ನಟಿಸುತ್ತಾರೆ.ಕೇವಲ ಸೃಜನಶೀಲ ಸಿನಿಮಾವನ್ನೇ ನಂಬಿರುವ ಕಂಗನಾಳಿಗೆ ಬಹುಶಃ ಇದನ್ನು ಸಹಿಸಲಾಗಲಿಲ್ಲ. ಅಲ್ಲದೆ, ಕೃಷ್ಣವರ್ಣದ ಈಕೆ ತೆರೆ ಮೇಲೆ ಶ್ವೇತವರ್ಣ ದವಳಾಗಲೂ ಇಷ್ಟಪಡುವುದಿಲ್ಲ. ಈಗ ಕೋಪಗೊಂಡ ಕಂಗನಾಳ ಕಣ್ಣಲ್ಲಿ ಯಾವ್ಯಾವ ಸ್ಟಾರ್‍ಗಳು ಬಂದುಹೋಗಿರಬಹುದು? ಶಾರೂಖ್ ಬಂದಿರಬಹುದು! ಇಮಾಮಿ ಫೇರ್ ಆ್ಯಂಡ್ ಹ್ಯಾಂಡ್ಸಮ್ ಜಾಹೀರಾತಿನಲ್ಲಿ ಶಾರೂಖ್‍ನ ನಟನೆಯೇ ಹಾಗಿದೆ. ಸ್ಟಾರ್ ಶಾರೂಖ್ ನಡೆದು ಬರ್ತಿರ್ತಾನೆ, ಎಲ್ಲರೂ ಅವನ ಫೋಟೋ ಕ್ಲಿಕ್ಕಿಸುತ್ತಾರೆ, ಸುಂದರಿಯರು ಬಂದು ಮುತ್ತಿಗೆ ಹಾಕುತ್ತಾರೆ. ಇದನ್ನೆಲ್ಲ  ನೋಡುತ್ತಾ ನಿಂತ ಕೃಷ್ಣವರ್ಣದ ಹುಡುಗ ನೊಬ್ಬ `ನಾನ್ಯಾಕೆ ಅವನಂತೆ ಬೆಳ್ಳಗಿಲ್ಲ' ಎಂದು ಮುಖ ಬಾಡಿಸಿ ಕೊಳ್ಳುತ್ತಾನೆ. ಶಾರೂಖ್ ಅವನ ಬಳಿ ಬಂದು, ಡೋಂಟ್‍ವರಿ ಎನ್ನುತ್ತಾ ಇಮಾಮಿ ಫೇರ್‍ನೆಸ್ ಕ್ರೀಮನ್ನು ಕೈಗಿಡುತ್ತಾನೆ. ಈ ಜಾಹೀರಾತಿನ ವರ್ಣಭೇದ ನೀತಿಯನ್ನೂ ಕಂಗನಾ ಸಹಿಸಿರಕ್ಕಿಲ್ಲ.ಜಾನ್ ಅಬ್ರಾಹಂ ಆಗಿರಬಹುದು! ಅವನ ಗಾರ್ನಿಯರ್ ಮೆನ್ ಪವರ್‍ಲೈಟ್ ಜಾಹೀರಾತನ್ನು ನೀವೂ ನೋಡಿರಬಹುದು.ಬಿಸಿಲಿನಲ್ಲಿ ಜಾನ್ ಸಿಕ್ಕಾಪಟ್ಟೆ ವೇಗದಿಂದ ಸೈಕ್ಲಿಂಗ್  ಮಾಡುತ್ತಾನೆ. ಕನ್ನಡಿಯೆದುರು ಬಂದು ನಿಂತಾಗ ಅಂಗಿಯೊಳಗಿನ ಬಿಳಿಮೈಗೂ ಕಪ್ಪಾದ ಕೈಗೂ ವ್ಯತ್ಯಾಸ ಕಂಡುಕೊಂಡು, ಗಾರ್ನಿಯರ್ ಫೇರ್‍ನೆಸ್ ಕ್ರೀಮನ್ನು ವೀಕ್ಷಕರ ಮುಂದಿಡುತ್ತಾನೆ. ಎರಡೇ ವಾರದಲ್ಲಿ ನೀವು ಬಿಳಿಯರಾಗಬಹುದು ಎನ್ನುವ ಈ ಜಾಹೀರಾತಿಗೂ ಕಂಗನಾ ಸೀರಿಯಸ್ಸಾಗಿ ಕುಟುಕಿರಬಹುದು.ಪಾಂಡ್ಸ್ ವೈಟ್‍ಬ್ಯೂಟಿ ಜಾಹೀರಾತೂ ಇಲ್ಲಿ ಪರೋಕ್ಷ ಉದಾಹರಣೆ ಆಗಿರಬಹುದು. ಇದರಲ್ಲಿ ನಟ ಸೈಫ್ ಅಲಿಖಾನ್,ಪ್ರಿಯಾಂಕಾ ಚೋಪ್ರಾಳನ್ನು ಕೃಷ್ಣವರ್ಣಿ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡುತ್ತಾನೆ. ಬಿಳಿಯಿರುವ ನೇಹಾ ಧೂಪಿಯಾದೊಂದಿಗೆ
ಮ್ಯಾಗ್‍ಜೀನ್ ಒಂದಕ್ಕೆ ಕವರ್ ಫೋಟೋ ಆಗುತ್ತಾನೆ. ಇದನ್ನು ಕಂಡು ಬೇಸರದಲ್ಲಿರುವ ಪ್ರಿಯಾಂಕಾ ಪಾಂಡ್ಸ್ ವೈಟ್‍ಬ್ಯೂಟಿ ಕ್ರೀಮನ್ನು ಹಚ್ಚುತ್ತಾಳೆ. ಕೃಷ್ಣವರ್ಣದವರನ್ನು ಯಾರೂ
ಒಪ್ಪುವುದಿಲ್ಲ ಎಂಬ ಪರೋಕ್ಷ ಧ್ವನಿ ಇದರದ್ದು. ಹೀಗಾಗಿ ಕಂಗನಾ ಈ ಮೂವರ ಮೇಲೂ ಕೆಂಡಕಾರಿರಬಹುದು! ನ್ಯೂಟ್ರೋಜೆನಾ ಕ್ರೀಮಿನ ದೀಪಿಕಾ ಪಡುಕೋಣೆ,ವ್ಯಾಸಲೀನ್ ಮೆನ್ ಕ್ರೀಮಿನ ಶಾಹೀದ್ ಕಪೂರ್ ಜಾಹೀರಾತು ಗಳನ್ನೂ ಕಂಗನಾ ಒಪ್ಪಿರಕ್ಕಿಲ್ಲ. ಶ್ವೇತವರ್ಣದ ಮೈಗೆ ಗಾರ್ನಿಯರ್ ಲೈಟ್‍ಮಾಯಟರ್ ಕ್ರೀಮು ಹಚ್ಚಿದರೆ ಬಿಳಿಯಾಗುತ್ತದೆ ಎಂದ ಇಶಾ ಡಿಯೋಲ್ ಕೂಡ ಕಂಗನಾಳ ಕೆಂಗಣ್ಣಿಗೆ ಗುರಿಯಾಗಿರಬಹುದು.ಕೆಲವು ಫೇರ್‍ನೆಸ್ ಕ್ರೀಮುಗಳ ಜಾಹೀರಾತಿಗೆ ನಟಿಸಿದ ಅನುಷ್ಕಾ ಶರ್ಮಾ ಕೂಡ ಈಗ ಆತ್ಮವಿಮರ್ಶೆಗೆ ಒಳಗಾಗಬೇಕಾದ ಸ್ಥಿತಿ ಇದೆ.

ಅಷ್ಟೇ ಅಲ್ಲ, ಪಾಂಡ್ಸ್ ಕ್ರೀಮನ್ನು ಜನಪ್ರಿಯಗೊಳಿಸಿದ ಐಶ್ವರ್ಯ ರೈಗೂ ಕಂಗನಾಳ ನಿಷ್ಠುರ ಮಾತು ಕಸಿವಿಸಿ ತಂದಿರಬಹುದು. ನಟಿಯರು ಫೇರ್ ನೆಸ್ ಕ್ರೀಮ್ ಜಾಹೀರಾತಿನ ಹೊರತಾಗಿ, ಬೇರಾವುದರಲ್ಲೇ ನಟಿಸಲಿ.ಕಂಗನಾಳದ್ದು ನೋ ಅಬ್ಜೆಕ್ಷನ್. ಹಾಗಾದರೆ, ಈ ಫೇರ್‍ನೆಸ್ ಕ್ರೀಮ್ ಜಾಹೀರಾತುಗಳು ನಮ್ಮ ಹಾದಿ ತಪ್ಪಿಸುತ್ತಿರುವುದು ಸತ್ಯವಾ? ಇದು ಕೊಲೆ- ದರೋಡೆಯಂಥ ಕ್ರೈಮಿಗೆ ಸಮನಾ? ಇವುಗಳಲ್ಲಿ ನಟಿಸಿರುವ ತಾರೆಯರೇ ಬಾಯಿ ತೆರೆಯಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT