ಸಿದ್ದಾರ್ಥ ಶುಕ್ಲಾ 
ಬಾಲಿವುಡ್

ಬಾಲಿಕಾ ವಧು ಸಿದ್ದಾರ್ಥ ಖತ್ರೋಂ ಕೆ ಖಿಲಾಡಿ 7ರ ವಿಜೇತ

ಖತ್ರೋಂ ಕೆ ಖಿಲಾಡಿ, ಕಭೀ ಪೀಡಾ ಕಭೀ ಕೀಡಾ 7ನೇ ಆವೃತ್ತಿಯಲ್ಲಿ ಬಾಲಿಕಾ ವಧು ನಟ ಸಿದ್ದಾರ್ಥ ಶುಕ್ಲ ವಿಜೇತರಾಗಿದ್ದಾರೆ...

ಮುಂಬೈ: ಖತ್ರೋಂ ಕೆ ಖಿಲಾಡಿ, ಕಭೀ ಪೀಡಾ ಕಭೀ ಕೀಡಾ 7ನೇ ಆವೃತ್ತಿಯಲ್ಲಿ ಬಾಲಿಕಾ ವಧು ನಟ ಸಿದ್ದಾರ್ಥ ಶುಕ್ಲ ವಿಜೇತರಾಗಿದ್ದಾರೆ.

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ನಡೆಸಿದ ಸೆಲೆಬ್ರಿಟಿ ಸ್ಟಂಟ್ ಅಧಾರಿತ ರಿಯಾಲಿಟಿ ಶೋ ಮೈನವಿರೇಳಿಸುವ ಪ್ರದರ್ಶನದಲ್ಲಿ ಅಂತಿಮ ಹಂತದಲ್ಲಿದ್ದ ಸನಾ ಸಯೀದ್ ಮತ್ತು ಮುಕ್ತಿ ಮೋಹನ್ ಅವರನ್ನು ಸೋಲಿಸುವ ಮೂಲಕ ಸಿದ್ಧಾರ್ಥ ವಿಜಯಿಯಾಗಿದ್ದು, 25 ಲಕ್ಷ ರುಪಾಯಿ ನಗದು ಮತ್ತು ಹೊಸ ಟಾಟಾ ಟಿಯಾಗೊ ಕಾರನ್ನು ಬಾಚಿಕೊಂಡಿದ್ದಾರೆ.

ಅರ್ಜೆಂಟೀನಾದಲ್ಲಿ 8 ವಾರಗಳು ನಡೆದ ಸ್ಟಂಟ್ ಸವಾಲುಗಳಲ್ಲಿ 35ರ ಹರೆಯದ ಶುಕ್ಲ ಗಾಯವಾದರೂ ಬಿಡದೆ ಅಪೂರ್ವ ಮಾನಸಿಕ ಹಾಗೂ ದೈಹಿಕ ದೃಢತೆ ಪ್ರದರ್ಶಿಸಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರು.

ಅಮೆರಿಕದ ಫಿಯರ್ ಫ್ಯಾಕ್ಟರ್ ರಿಯಾಲಿಟಿ ಶೋದ ರೂಪಾಂತರವಾಗಿದ್ದ ಖತ್ರೋಂ ಕೆ ಖಿಲಾಡಿ ಶೋದಲ್ಲಿ ಅಂತಿಮ ಪ್ರದರ್ಶನದಲ್ಲಂತೂ ಸಿದ್ದಾರ್ಥ ಶುಕ್ಲ ನೀರು, ಗಾಳಿ ಮತ್ತು ಬೆಂಕಿಯ ಮಧ್ಯೆ ವಿವಿಧ ಸ್ಟಂಟ್​ಗಳನ್ನು ಪ್ರದರ್ಶಿಸಿ ನೋಡುಗರಿಗೆ ಮೈ ರೋಮಾಂಚನವಾಗುವಂತೆ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿ.ಕೆ ಶಿವಕುಮಾರ್; ಮಧ್ಯಾಹ್ನ 2.30ಕ್ಕೆ ರಾಜೀನಾಮೆ; ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT