ಬಾಲಿವುಡ್ ನಟ ಸಲ್ಮಾನ್ ಖಾನ್(ಸಂಗ್ರಹ ಚಿತ್ರ) 
ಬಾಲಿವುಡ್

ಒಲಿಂಪಿಕ್ ಅಥ್ಲೀಟ್ ಗಳಿಗೆ ತಲಾ 1 ಲಕ್ಷದ 1 ಸಾವಿರ ರೂಪಾಯಿ ಬಹುಮಾನ ನೀಡಲಿರುವ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಈ ವರ್ಷದ ರಿಯೊ ಒಲಿಂಪಿಕ್ಸ್ ಗೆ ಭಾರತದ ಸದ್ಭಾವನಾ ರಾಯಭಾರಿಯಾಗಿ...

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಈ ವರ್ಷದ ರಿಯೊ ಒಲಿಂಪಿಕ್ಸ್ ಗೆ ಭಾರತದ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಾಗ ಟೀಕಿಸಿದವರೇ ಅಧಿಕ ಮಂದಿ. ಅವರನ್ನೇಕೆ ರಾಯಭಾರಿ ಮಾಡಿದ್ದು, ಬೇರಾರು ಸಿಗಲಿಲ್ಲವೇ ಎಂದು ಪ್ರತಿಕ್ರಿಯಿಸಿದ್ದರು. 
ಆದರೆ ಇದೀಗ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡುವ ಮೂಲಕ ಎಲ್ಲಾ ಟೀಕಾಕಾರರು ಸುಮ್ಮನಾಗುವಂತೆ ಮಾಡಿದ್ದಾರೆ.
''ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಎಲ್ಲಾ ಅಥ್ಲೀಟ್ ಗಳಿಗೆ ಪ್ರೋತ್ಸಾಹಕ, ಶ್ಲಾಘನೆಯ ಸೂಚಕವಾಗಿ ನಾನು ಪ್ರತಿಯೊಬ್ಬರಿಗೂ 1 ಲಕ್ಷದ 1 ಸಾವಿರ ರೂಪಾಯಿ ಚೆಕ್ ನೀಡುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ಕ್ರೀಡೆಯನ್ನು ಪ್ರೋತ್ಸಾಹಿಸಲು ಸರ್ಕಾರ ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಅದರ ಜೊತೆಗೆ ಪ್ರತಿಯೊಬ್ಬ ಭಾರತೀಯರು ತಮ್ಮ ಕೈಲಾದ ಸಣ್ಣ ಪ್ರೋತ್ಸಾಹವನ್ನಾದರೂ ಮಾಡಬೇಕು. ಭವಿಷ್ಯದ ಚಾಂಪಿಯನ್ನರನ್ನು ರೂಪಿಸುವಲ್ಲಿ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್(ಒಜಿಕ್ಯು) ಮಾಡುತ್ತಿರುವ ಕೆಲಸವನ್ನು ಶ್ಲಾಘಿಸುತ್ತೇನೆ ಎಂದು 50 ವರ್ಷದ ಬಾಲಿವುಡ್ ಸೂಪರ್ ಸ್ಟಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ನಂತರವೂ ತೈಲ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ: ಇರಾನ್

ಮುಸ್ಲಿಂ ಯುವತಿಯೊಂದಿಗೆ ಲವ್, ಮದುವೆ ಬೇಡ ಅಂದಿದ್ದಕ್ಕೆ 84 ಬಾರಿ ಇರಿದು ಸಹೋದರಿಯ ಕೊಲೆ: ಅಮ್ಮನಿಗೆ "ಸರ್ಪ್ರೈಸ್" ಎಂದ ಇಂಜಿನಿಯರ್!

Fuel crisis: ಶೇ.30 ರಷ್ಟು ವೇತನ ಕಡಿತಕ್ಕೆ ಪಾಕ್ ಪ್ರಧಾನಿ ಅನುಮೋದನೆ!

ಮೋದಿ ರ‍್ಯಾಲಿಗೆ ಮುನ್ನ ಕೋಲ್ಕತ್ತಾದಲ್ಲಿ TMC, BJP ಕಾರ್ಯಕರ್ತರ ನಡುವೆ ಮಾರಾಮಾರಿ; ಪರಸ್ಪರ ಕಲ್ಲು ತೂರಾಟ

'ರನ್-ಔಟ್ ಹೆಸರಿನಲ್ಲಿ ನಂಬಿಕೆ ದ್ರೋಹ': ಭಾರತದ ಮಾಜಿ ಕ್ರಿಕೆಟಿಗ Mohammad Kaif ಕಿಡಿ, ಹೇಳಿದ್ದು ಯಾರಿಗೆ?

SCROLL FOR NEXT