ಬಾಲಿವುಡ್

ವೈವಾಹಿಕ ಜೀವನದಲ್ಲಿ ದೌರ್ಜನ್ಯ ಸಹಿಸಿಕೊಳ್ಳುತ್ತಿರುವ ಸುಶಿಕ್ಷಿತ ಮಹಿಳೆಯರು: ಕತ್ರೀನಾ

Shilpa D

ಮುಂಬಯಿ: ವೈವಾಹಿಕ ಜೀವನದಲ್ಲಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ನಡೆಯುವ ಲೈಂಗಿಕ ಶೋಷಣೆಯ ಗಂಭೀರ ಅಪರಾಧ. ಇದನ್ನು ಮುಚ್ಚಿಡುವುದು ತಪ್ಪು ಎಂದು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಹೇಳಿಕೊಂಡಿದ್ದಾರೆ.
 
ನಮ್ಮಲ್ಲಿ ಹೆಚ್ಚಿನ ಮಹಿಳೆಯರು ಸುಶಿಕ್ಷಿತರೇ. ಆದರೂ ಸಮಾಜಕ್ಕೆ ಹೆದರಿ ವೈವಾಹಿಕ ಜೀವನದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮೌನವಹಿಸುತ್ತಾರೆ.  ನಮ್ಮ ಸಮಾಜ ವೈವಾಹಿಕ ಲೈಂಗಿಕ ಶೋಷಣೆಯನ್ನು ಅತ್ಯಾಚಾರ ಎಂದು ಪರಿಗಣಿಸುವುದೇ ಇಲ್ಲ. ಹೀಗಾಗಿ ಮಹಿಳೆಯರು ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ ಎಂದು ಕತ್ರಿನಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮಹಿಳಾ ಪರವಾದ ಕೂಗು ಹಳೆಯದು. ಅವರು ಸಮಾಜದ ಹಲವು ಮಗ್ಗಲುಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೂ, ವಿರೋಧಿಸುವ ಧೈರ್ಯ ತೋರಿಸುತ್ತಿಲ್ಲ ಎಂಬುದು ಕತ್ರಿನಾ ಅಸಮಾಧಾನಕ್ಕೆ ಕಾರಣವಾಗಿದೆ.
 
ಎಷ್ಟೋ ಮಹಿಳೆಯರು ದೌರ್ಜನ್ಯ ನಡೆಯುತ್ತಿದ್ದರೂ ಅದನ್ನು ವಿರೋಧಿಸದೆ ಸಹಿಸಿಕೊಳ್ಳುದನ್ನು ನೋಡಿದ್ದೇನೆ. ಅದರಲ್ಲೂ ಸುಶಿಕ್ಷಿತರೂ ಹೀಗೆ ಮೌನವಾಗಿರುವುದನ್ನು ಕಂಡಾಗ  ಆಶ್ಚರ್ಯವಾಗುತ್ತದೆ ಎಂದು ಕತ್ರಿನಾ ತಿಳಿಸಿದ್ದಾರೆ.
 
ಮಹಿಳೆಯರು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಗುರುತಿಸಲು ಸೋತಿದ್ದಾರೆ. ಜೊತೆಗೆ ತಾವೇನಾದರೂ ದೌರ್ಜನ್ಯದ ವಿರುದ್ಧ ಮಾತನಾಡಿದರೆ, ವಿರೋಧಿಸಿದರೆ ಹಲವರು ತಮ್ಮ ವಿರುದ್ಧ ಬೊಟ್ಟು ಮಾಡಬಹುದು ಎಂಬ ಹಿಂಜರಿಕೆ ಎನ್ನುವುದು ಕತ್ರಿನಾ ಅಭಿಪ್ರಾಯ.

SCROLL FOR NEXT