ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಬಿಡುಗಡೆಯಾದ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.
ತಾನು ನಟಿಸಿರುವ ಸುಲ್ತಾನ್ ಸಿನಿಮಾಗಿಂತ ದಂಗಲ್ ಅತ್ಯುತ್ತಮವಾಗಿದೆ ಎಂದು ನಟ ಸಲ್ಮಾನ್ ಖಾನ್ ಟ್ಟೀಟ್ ಮಾಡಿದ್ದಾರೆ. ಅಲಿ ಅಬ್ಬಾಸ್ ಜಫರ್ ನಿರ್ದೇಶನದ ಸುಲ್ತಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹರ್ಯಾಣದ ಕುಸ್ತಿ ಪೈಲ್ವಾನ್ ಪಾತ್ರ ನಿರ್ವಹಿಸಿದ್ದರು,
ನನ್ನ ಕುಟುಂಬ ದಂಗಲ್ ಸಿನಿಮಾ ನೋಡಿದೆ, ಸುಲ್ತಾನ್ ಗಿಂತ ಅತ್ಯದ್ಭುತವಾಗಿ ದಂಗಲ್ ಮೂಡಿ ಬಂದಿದೆ. ನಾನು ವಯಕ್ತಿಕವಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಅಮಿರ್, ಆದರೆ ವೃತ್ತಿಗತವಾಗಿ ನಿಮ್ಮನ್ನು ದ್ವೇಷಿಸುತ್ತೇನೆ ಎಂದು ನಟ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೀರ್ ಖಾನ್" ಸಲ್ಮಾನ್ ಖಾನ್ ನಿಮ್ಮ ದ್ವೇಷದಲ್ಲಿ ನನಗೆ ಕೇವಲ ಪ್ರೀತಿ ಮಾತ್ರ ಕಾಣುತ್ತದೆ ಎಂದು ರಿಟ್ವೀಟ್ ಮಾಡಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ದಂಗಲ್ ಸಿನಿಮಾದಲ್ಲಿ ಕುಸ್ತಿ ಪೈಲ್ವಾನ್ ಆದ ತಂದೆಯೊಬ್ಬ ತನ್ನ ಹೆಣ್ಣು ಮಕ್ಕಳನ್ನ ಸಬಲೀಕರಣಗೊಳಿಸಲು ಕುಸ್ತಿ ತರಬೇತಿ ನೀಡುವ ಕಥೆ ಇದಾಗಿದೆ. ಮಾಜಿ ರಾಷ್ಟ್ರೀಯ ಕುಸ್ತಿ ಚ್ಯಾಂಪಿಯನ್ ಆಗಿದ್ದ ಮಹಾವೀರ್ ಸಿಂಗ್ ಪೋಗಟ್ ಅವರ ಪಾತ್ರವನ್ನು ಅಮೀರ್ ಖಾನ್ ನಿರ್ವಹಿಸಿದ್ದಾರೆ. ತನ್ನ ಪುತ್ರಿಯರಿಗೆ ಕುಸ್ತಿ ಕಲಿಸುವುದಕ್ಕೆ ಹೆಂಡತಿ ಹಾಗೂ ಇಡೀ ಗ್ರಾಮದ ವಿರೋಧವಿರುತ್ತದೆ. ವಿರೋಧದ ನಡುವೆಯೂ ಗೀತಾ ಮತ್ತು ಬಬಿತಾರಿಗೆ ಕುಸ್ತಿ ಕಲಿಸಲಾಗುತ್ತದೆ, ದಂಗಲ್ ಸಿನಿಮಾ ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ಬಿಂಗ್ ಆಗಿದೆ.